ಚಂದ್ರಯಾನ-2: ಎರಡನೇ ಕಕ್ಷೆ ಏರಿಕೆ ಪ್ರಕ್ರಿಯೆ ಯಶಸ್ವಿ

  ಚೆನ್ನೈ, ಆ 21        ಚಂದ್ರಯಾನ-2ನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಿದ ಬೆನ್ನಲ್ಲೇ ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ನೌಕೆ ಇಳಿಯಲು ಅನುವಾಗುವ ತಾಂತ್ರಿಕ ಪ್ರಕ್ರಿಯೆಗೆ ಇಂದು ಯಶಸ್ವಿ ಚಾಲನೆ ದೊರೆತಿದೆ 

 ಚಂದ್ರನ ಮೇಲ್ಮೈನಿಂದ 100 ಕಿಲೋ ಮೀಟರ್ ದೂರದ ಕಕ್ಷೆಗೆ ನೌಕೆಯನ್ನು ಸ್ಥಾಪಿಸುವ ಸಂಬಂಧ 2ನೇ ಸುತ್ತಿನ ಕಕ್ಷೆ ಏರಿಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರೆವೇರಿತು  ಇಂತಹ ಒಟ್ಟು 4 ಸುತ್ತುಗಳ ಪ್ರಕ್ರಿಯೆ ನಡೆಯಲಿದೆ. 

  ಆನ್ ಬೋರ್ಡ್ ಪ್ರೊಪಲ್ಷನ್ ಸಿಸ್ಟಮ್ ಬಳಸಿಕೊಂಡು ಎರಡನೇ ಲೂನಾರ್ ಬೌಂಡ್ ಆರ್ಬಿಟ್ ಮ್ಯಾನೊವರ್ ಗೆ ಬುಧವಾರ 12:50ಕ್ಕೆ ಸರಿಯಾಗಿ ಚಂದ್ರಯಾನ 2ನ್ನು  ತಲುಪಿಸಲಾಯಿತು  ಎಂದು ಇಸ್ರೋ ತಿಳಿಸಿದೆ 

  ಈ ಅವಧಿ 1,228 ಸೆಕೆಂಡುಗಳಾಗಿದ್ದು, ಕಕ್ಷೆಯು 118 ಕಿಮೀ ಘಿ4,412 ಕಿಮೀ ಸಾಧಿಸಿದೆ ಬಾಹ್ಯಾಕಾಶ ನೌಕೆಯ ಎಲ್ಲ ನಿಯತಾಂಕಗಳು ಸಾಮಾನ್ಯವಾಗಿವೆ ಎಂದು ಮಾಹಿತಿ ನೀಡಿದೆ   

  ಮುಂದಿನ ಲೂನಾರ್ ಬೌಂಡ್ ಆಬರ್ಿಟ್ ಮ್ಯಾನೋವರ್ ಆಗಸ್ಟ್ 28ರಂದು ನಡೆಯಲಿದೆ.