ಲೋಕದರ್ಶನ ವರದಿ
6ರಿಂದ ಚಂದನಹೊಸೂರ ಕಲ್ಮೇಶ್ವರ ಜಾತ್ರಾ ಮಹೋತ್ಸವ
ಬೆಳಗಾವಿ 03: ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಪ್ರತಿವರ್ಷದ ಪದ್ದತಿಯಂತೆ ರವಿವಾರ ದಿ. 06 ರಿಂದ 10 ರವರೆಗೆ ಐದು ದಿನಗಳ ಕಾಲ ಕಲ್ಮೇಶ್ವರ ಜಾತ್ರಾ ಮಹೋತ್ಸವು ಅತಿ ವಿಜೃಂಭಣೆಯಿಂದ ಜರುಗುವುದು.
ರವಿವಾರ ದಿ. 6ರಂದು ಜಾತ್ರಾ ಪ್ರಾರಂಭವಾಗಿ ಅಂಬಲಿ ಬಂಡೆಗಳನ್ನು ಸಿದ್ಧಪಡಿಸುವುದು ಹಾಗೂ ಕಿಚ್ಚದ ಕಟ್ಟಿಗೆಯನ್ನು ಪೂಜೆ ಮಾಡಿ ತರುವುದು.
ಸೋಮವಾರ ದಿ. 7ರಂದು ಸಾಯಂಕಾಲ 6 ಗಂಟೆಗೆ ಕಲ್ಮೇಶ್ವರ ಗುಡಿ ಸುತ್ತ ಅಂಬಲಿ ಬಂಡಿಗಳು ಪ್ರದರ್ಶನ ಹಾಕುವುದು. ನಂತರ ಅಂಬಲಿ ಹಾಗೂ ಗುಗ್ಗರಿ ಮಹಾಪ್ರಸಾದ ಜರುಗುವುದು. ರಾತ್ರಿ 10 ಗಂಟೆಗೆ ಚೌಡಕಿ ಜಾನಪದಗಳು, ಜರುಗುವವು. ಮಂಗಳವಾರ ದಿ. 8ರಂದು ಗ್ರಾಮದ ಭಕ್ತಾಧಿಗಳಿಂದ ಚಕ್ಕಡಿ, ಟ್ರಾಕ್ಟರ, ಟೆಂಪು ಇನ್ನೀತರ ವಾಹನಗಳಿಂದ ಕಿಚ್ಚದ ಕಟ್ಟಿಗೆಯನ್ನು ಕಿಚ್ಚ ತಯಾರಿಸಿ ಸಾಯಂಕಾಲ 6 ಗಂಟೆಗೆ ಕಿಚ್ಚ ಹಾಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.30ಕ್ಕೆ ಶ್ರೀ ಕೃಷ್ಣ ಪಾರಿಜಾತ ಇರುವುದು.
ಬುಧವಾರ ದಿ. 9ರಂದು ಕಲ್ಮೇಶ್ವರ ದೇವಸ್ಥಾನದಲ್ಲಿ ಕಾಯಿ ಒಡೆಯುವುದು ನಂತರ ಭಕ್ತಾಧಿಗಳಿಂದ ತೂಕಾನುತೂಕ ಟೆಂಗಿನ ಕಾಯಿಗಳನ್ನು ನೀಡಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಗುರುವಾರ ದಿ. 10ರಂದು ಪಾಲಕಿ ಸೇವೆಯೊಂದಿಗೆ ಜಾತ್ರ್ರೆಯು ಸಂಪನ್ನವಾಗುವುದು ಎಂದು ಗ್ರಾಮದ ಪಂಚಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.