ಹೊಸಪೇಟೆ೧೦: ಹಸಿವಿನಿಂದ ಬಳಲುತ್ತಿರುವ ದಿನಗೂಲಿ, ಬಡಕಾಮರ್ಿಕರು ನಿರಾಶ್ರಿತರಿಗೆ, ಬಿಕ್ಷುಕರಿಗೆ ಅಲೆಮಾರಿ ವಾಸಿಗಳಿಗೆ ಮರಿಯಮ್ಮನಹಳ್ಳಿಯಲ್ಲಿ ಬೀಡು ಬಿಟ್ಟಿರುವವರಿಗೆ ಆಹಾರ ಪೊಟ್ಟಣಗಳನ್ನು ಕನರ್ಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗ್ತಿ ವಿತರಿಸಿದರು.
ಮಾರಕ ರೋಗ ಕೊರೋನಾ ತಡೆಗಟ್ಟಲು ದೇಶವೇ ಲಾಕ್ಡೌನ್ ಆಗಿದ್ದು, ರೋಗದ ವಿರುದ್ಧದ ಹೋರಾಟದಲ್ಲಿ ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತರು, ದಿನಗೂಲಿ ಬಡಕಾಮರ್ಿಕರ ಹಾಗೂ ನೂರಾರು ಜನರ ಹಸಿವನ್ನು ನೀಗಿಸುವ ಕಾರ್ಯ ಮರಿಯಮ್ಮನಹಳ್ಳಿ ಪಟ್ಟಣದಾದ್ಯಂತ ಮುಂದುವರೆದಿದೆ.
ದಿನನಿತ್ಯ ಭಿಕ್ಷುಕರಿಗೆ, ಅಲೆಮಾರಿ ಕುಟುಂಬಗಳಿಗೆ, ಕಡುಬಡತನದ ಕುಟುಂಬದ ಜನರಿಗೆ ಪಟ್ಟಣದ ದಾನಿಗಳು ಆಹಾರ ಪೊಟ್ಟಣಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂದು ಕನರ್ಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗ್ತಿ ತಮ್ಮ ಗುರುಗಳು ಹಾಗೂ ಆಶ್ರಯದಾತೆಯಾದ ಕಾಳಮ್ಮ ಜೋಗ್ತಿಯವರ ಪುಣ್ಯಸ್ಮರಣೆಯನ್ನು ನಿರಾಶ್ರಿತರ ಸ್ಥಳಗಳಿಗೆ ಆಗಮಿಸಿ ಆಹಾರ ಪೊಟ್ಟಣಗಳನ್ನು ಒದಗಿಸಿದರೊ.
ಪಟ್ಟಣದ ಪೊಲೀಸ್ಪೇದೆ ಕೊಟ್ರೇಶ್, ಮುಖಂಡರಾದ ಡಿ. ರಾಘವೇಂದ್ರ ಶೆಟ್ಟಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಇಂದಿರಾನಗರದಲ್ಲಿ ಹೊರವಲಯದಲ್ಲಿ ಬೀಡುಬಿಟ್ಟಿರುವ ಮಹಾರಾಷ್ಟ್ರ ಮೂಲದ ಅಲೆಮಾರಿ ಕುಟುಂಬಗಳಿಗೆ, ಬಿಹಾರದ ಕೂಲಿ ಕಾಮರ್ಿಕರಿಗೆ, ಸಂತೆ ಮಾರುಕಟ್ಟೆಯಲ್ಲಿ ಉಳಿದುಕೊಂಡಿರುವ ನಿರಾಶ್ರಿತರು ಹಾಗೂ ಭಿಕ್ಷುಕರಿಗೆ, ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ನಿಂತಿರುವ ಲಾರಿ ಕ್ಲೀನರ್, ಡ್ರೈವರ್ ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ಹೊರಟಿರುವ ಬಡಕಾಮರ್ಿಕರಿಗೆ ಆಹಾರ ಪೊಟ್ಟಣಗಳನ್ನು ಒದಗಿಸಿ ಮಾನವೀಯತೆಯನ್ನು ಮೆರೆದರು. ಈ ಸಂದರ್ಭದಲ್ಲಿ ಮುಖಂಡರಾದ ಪಿ.ರಾಘವೇಂದ್ರ, ಮುದಗಲ್ ಶ್ರೀನಿವಾಸ್, ಹಾಗೂ ಇತರರು ಇದ್ದರು.