ಪ್ರವಾಹದಲ್ಲಿ ಸಿಲುಕಿದ್ದ ಭಕ್ತರನ್ನು ರಕ್ಷಿಸಿದವರಿಗೆ ಪ್ರಶಂಸನಾ ಪತ್ರ
Certificate of appreciation for those who rescued devotees stranded in the floods
ಲೋಕದರ್ಶನ ವರದಿ
ಉಗರಗೋಳ 29 : ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದಿದ್ದ ಪ್ರವಾಹದ ವೇಳೆ ನೀರಿನಲ್ಲಿ ಸಿಲುಕಿದ್ದ ಭಕ್ತರನ್ನು ಕಾಪಾಡಿದ್ದ ಪ್ರವಾಸಿ ಮಿತ್ರರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಗೆ ಯಲ್ಲಮ್ಮ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಪ್ರಶಂಸನಾ ಪತ್ರ ವಿತರಿಸಲಾಯಿತು.
ಯಲ್ಲಮ್ಮನಗುಡ್ಡದಲ್ಲಿ ಸುರಿದ ಭಾರಿ ಮಳೆಯಿಂದ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಯಲ್ಲಮ್ಮ ದೇವಿ ದರ್ಶನ ಪಡೆದು ಹೊರಬರುತ್ತಿದ್ದ ಭಕ್ತರು ನೀರಿನಲ್ಲಿ ಸಿಲುಕಿದ್ದರು.
ಆಗ ಎಂ.ಎಫ್.ಕಿತ್ತೂರ, ಶಿವಾಜಿ ಕರಿಮುಖನವರ, ಗದಿಗೆಪ್ಪ ಕಂಕಣವಾಡಿ, ಮಹಾದೇವ ಹೊಸೂರ, ಯೋಗೇಶ ವಾಡಕರ, ಉಮೇಶ ನನದಗಿ, ನಾಗರಾಜ ಕರಿಮುಖನವರ ಅವರು, ನೆರವಿಗೆ ಧಾವಿಸಿ ಭಕ್ತರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದರು.
ಮಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಭಕ್ತರನ್ನು ರಕ್ಷಿಸಿದ ಪ್ರವಾಸಿ ಮಿತ್ರರು ಮತ್ತು ಗೃಹರಕ್ಷಕ ದಳದವರ ಕಾರ್ಯ ಮೆಚ್ಚಿ ಪ್ರಶಂಸನಾ ಪತ್ರ ಕೊಡುತ್ತಿದ್ದೇವೆ’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಹೇಳಿದರು.
ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಶೀತಲ ಕಡಟ್ಟಿ, ಮಂಜುನಾಥ ಅಂಗಡಿ, ಜಗದೀಶ ರೇವಣ್ಣವರ, ಸಂಗಮೇಶ ಪಂಪನವರ, ಡಿ.ಆರ್.ಚವ್ಹಾಣ, ಎಂ.ಪಿ.ದ್ಯಾಮನಗೌಡ್ರ, ಸಂಜು ಕರಲಿಂಗನವರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 