ಲೋಕದರ್ಶನ ವರದಿ
ಮುನವಳ್ಳಿ: ನಿವೃತ್ತ ಉಪನ್ಯಾಸಕರಾದ ಡಾ.ಆರ್.ಬಿ.ಚಿಲುಮಿಯವರ 12 ನೆಯ ಶತಮಾನದ ನೂರೆಂಟು ಶಿವಶರಣ ಶರಣೆಯರ ಚರಿತಾಮೃತ.ನಾಡು ನುಡಿಗೆ ಕೀತರ್ಿ ತಂದವರು.ಮಹಾಯೋಗಿ ವೇಮನ ಚರಿತಾಮೇತ.ವಚನ ವೈವಿಧ್ಯ ಎಂಬ ನಾಲು ಕೃತಿಗಳ ಲೋಕಾರ್ಪಣಾ ಸಮಾರಂಭ ಮುನವಳ್ಳಿ ಸಮೀಪದ ಕಟಕೋಳ ಗ್ರಾಮದ ಪ್ರಿಯದಶರ್ಿನಿ ವಿದ್ಯಾಲಯ ಹಿರೇಮಠ ಕಟಕೋಳ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷಟಸ್ಥಳ ಬ್ರಹ್ಮ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ.ಚಂದರಗಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಸಹಸ್ರಮಾನರತ್ನ ಪುರಸ್ಖೃತ ಟಿ.ಪಿಮನೋಳಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನಗೌಡ ಪಾಟೀಲ.ನಿವೃತ್ತ ಉಪಾಧ್ಯಾಯ ಎ.ಕೆ.ತೋರಣಗಟ್ಟಿ. ಬೆಳಗಾವಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಸಸಾಲಟ್ಟಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ.ಕೆ.ವೈ.ಹುಣಸೀಕಟ್ಟಿ. ಚಂದರಗಿ ಕ್ರೀಡಾ ಶಾಲೆಯ ಪ್ರಾಚಾರ್ಯ ಎ.ಎನ್.ಮೋದಗಿ.ನವೀನ ನಲವಡೆ.ಆರ್.ಎಸ್.ಪಾಟೀಲ.ಮಾಧ್ಯಮ ಪ್ರತಿನಿಧಿಗಳಾದ ತಾಜಾಜಿರಾವ್ ಮುರಂಕರ. ಬಸವರಾಜ ತುಳಜನ್ನವರ.ಶ್ರೀಮತಿ ಸುವರ್ಣ ಆರ್ ಚಿಲುಮಿ.ಎಸ್.ಎಂ.ಹುದ್ದಾರ.ಎಂ.ಎ.ನೀಲಾಕಾರಿ.ಚಂದ್ರು ಕಳಸಪ್ಪನವರ ವೇದಮೂತರ್ಿ ಬಿ.ಡಿ.ಹಿರೇಮಠ.ಬಿ.ದಂಡಿನದುಗರ್ಿ ಎ.ಕೆ.ತೋರಣಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಟಕೋಳ ಎಂ ಚಂದರಗಿಯ ಷಟಸ್ಥಲ ಬ್ರಬ್ಮ ಶಿವಾಚಾರ್ಯ ರತ್ನ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಸಾಹಿತಿ ಡಾ.ಆರ್.ಬಿ.ಚಿಲುಮಿ ಮಾತನಾಡಿ"ಪ್ರತಿನಿತ್ಯ ಓದುವ ಹವ್ಯಾಸದ ಜೊತೆಗೆ ಕನಿಷ್ಟ ಹತ್ತು ಪುಟಗಳಷ್ಟು ಚಿಂತನಾರ್ಹ ಮೌಲಿಕ ಬರಹಗಳನ್ನು ಬರೆಯುವುದನ್ನು ನಿವೃತ್ತಿಯಾದರೂ ಇಂದಿಗೂ ಅಳವಡಿಸಿಕೊಂಡಿರುವೆ.ಇದು ನನಗೆ ತೃಪ್ತಿಯನ್ನು ತಂದುಕೊಟ್ಟಿದೆ.
ಇಲ್ಲಿ ನನ್ನ ಕುಟುಂಬದ ಸಹಕಾರ ನೆನೆಯದಿದ್ದರೆ ತಪ್ಪಾದೀತು.ನನ್ನ ಸಹಧಮರ್ಿಣಿ ಇಂದಿಗೂ ಕೂಡ ಯಾವತ್ತೂ ಬೇಸರಿಸಿಕೊಳ್ಳದೇ ನನ್ನ ಬರಹಕ್ಕೆ ಸಹಕರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ."ಎಂದು ತಮ್ಮ ಬದುಕು ಬರಹ ಕುರಿತಂತೆ ಮಾತನಾಡುತ್ತ ಸ್ಮರಿಸಿಕೊಂಡರು.ಮೋಹನಗೌಡ ಪಾಟೀಲ ಮಾತನಾಡಿ"ಮುಂಬರುವ ದಿನಗಳಲ್ಲಿ ರಾಮದುರ್ಗ ತಾಲೂಕಿನ ಸಾಹಿತಿ ಮಾಹಿತಿ ಕೋಶ ಹೊರಬರುವಂತಾಗಲಿ.ಚಿಲುಮಿಯವರ ಬರಹಗಳ ವಿಚಾರ ಚಿಂತನ ಮಂಥನ ನಡೆಯುವಂತಾಗಲಿ"ಎಂದು ಹಾರೈಸಿದರು.ಬಸವರಾಜ ಸಸಾಲಟ್ಟಿ ಮಾತನಾಡಿ"ಟಿ.ಪಿ.ಮನೋಳಿಯವರು ಇಂದು ಒಬ್ಬ ಉತ್ತಮ ಪ್ರಾಧ್ಯಾಪಕರ ಕೃತಿಗಳನ್ನು ಇಲ್ಲಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಅಭಿನಂದನಾರ್ಹ.
ಅವರು ಸಹೃದಯ ಓದುಗರೂ ಸಾಹಿತ್ಯ ಪೋಷಕರೂ ಆಗಿದ್ದಾರೆ"ಎಂದು ತಿಳಿಸಿದರು.ವೈ.ಬಿ.ಕಡಕೋಳ ಮಾತನಾಡಿ"ಚಿಲುಮಿಯವರಂತಹ ಗುರುಗಳ ಜೊತೆಗಿನ ತಮ್ಮ ಒಡನಾಟ ಕುರಿತು"ಸ್ಮರಿಸಿದರು.ಕೆ.ವೈ.ಹುಣಸೀಕಟ್ಟಿಯವರು ಮಾತನಾಡುತ್ತ"ಮುಂಬರುವ ದಿನಗಳಲ್ಲಿ ಸಾಹಿತ್ಯದ ವಿಚಾರ ವಿಮಶರ್ೆ ಕಮ್ಮಟಗಳು ವಿಚಾರಗೋಷ್ಠಿಗಳು ಕಟಕೋಳದಲ್ಲಿ ನಡೆಯುವಂತಾಗಲಿ.ನಮ್ಮ ನೆಲದ ಸಾಹಿತಿಗಳ ಪರಿಚಯವೂ ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಗೆ ದೊರೆಯುವಂತಾಗಲಿ"ಎಂದು ಆಶಿಸಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಷಟಸ್ಥಳ ಬ್ರಹ್ಮ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ"ಡಿಸೆಂಬರ್ ತಿಂಗಳಲ್ಲಿ ತಮ್ಮ ಶ್ರೀಮಠದಿಂದ ಜರಗುವ ಕಾರ್ಯಕ್ರಮದಲ್ಲಿ 60 ಜನ ಸಾಹಿತಿಗಳನ್ನು ಗೌರವಿಸಲಾಗುವುದು.ಅದರಲ್ಲಿ ಚಿಲುಮಿಯವರಿಗೆ ಸಾಹಿತ್ಯ ಸಾಗರ ಬಿರುದು ದಯಪಾಲಿಸುವುದು ಸೇರಿದಂತೆ ಮುಂದಿನ ದಿನಗಳಲ್ಲಿ ರಾಮದುರ್ಗ ತಾಲೂಕ ಸಾಹಿತಿ ಮಾಹಿತಿ ಕೋಶ ತಮ್ಮ ಮಠದಿಂದ ಹೊರಬರಲಿ.
ಅದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ" ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಂ.ಎಸ್.ಹಗೇದಾಳ ಸ್ವಾಗತಿಸಿದರು.ವ್ಹಿ.ಎಸ್.ಜಂಗನ್ನವರ ನಿರೂಪಿಸಿದರು.ಕಿರಣ ಮುನವಳ್ಳಿ ವಂದಿಸಿದರು.