ಗರ್ಭಕೋಶ ಕ್ಯಾನ್ಸರ್ ಶಿಬಿರದ ಉದ್ಘಾಟನಾ ಸಮಾರಂಭ
ಧಾರವಾಡ 30:ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ, ಸಂಜೀವಿನಿ ಗ್ರಾಮೀಣ ಆಸ್ಪತ್ರೆ, ಹೆಬ್ಬಳ್ಳಿ, ರೂರಲ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಫಾರ್ ಹೆಲ್ತ ಸೈನ್ಸ್ ್ಘ ಎಜ್ಯುಕೇಶನ (ರೈಸ್) ಕರ್ನಾಟಕ ರೂರಲ್ ಸರ್ವಿಸ್ ಸೊಸೈಟಿ (ರಿ) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಗರ್ಭಕೋಶ ಕ್ಯಾನ್ಸರ್ ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ತಸ್ಮೀಯಾ ಬೇಗಂ, ಗರ್ಭಕೋಶ ಕ್ಯಾನ್ಸರ್‌ನಂತಹ ಅನೇಕ ಮಾರಕ ಕಾಯಿಲೆಗಳಿಂದ ದಿನನಿತ್ಯ ಸಾವಿರಾರು ಜನ ಸಾವನ್ನೆಪ್ಪುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಜಾಗೃತಿಯನ್ನು ಹೊಂದಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿಜಯಲಕ್ಷ್ಮೀ ಹಾನಗಲ್, ಗರ್ಭಕೋಶ ಕ್ಯಾನ್ಸರ್ ಕುರಿತು ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಟಾಟಾ ಹಿಟಾಚಿನ ಹೆಡ್ ಆಡ್ಮಿನ್ ಪ್ರಶಾಂತ ದಿಕ್ಷೀತ ಮಾತನಾಡಿ ಕ್ಯಾನ್ಸರ್‌ನ್ನು ಮುಂಚಿತವಾಗಿಯೆ ಬರದ ಹಾಗೆ ಇಂದಿನ ಯುವಪೀಳಿಗೆ ತಿಳಿದುಕೊಳ್ಳಬೇಕಿದೆ ಎಂದರು. ಅತಿಥಿಗಳಾಗಿ ಭಾಗವಹಿಸಿದ್ದ ಕೆ.ಆರ್.ಎಸ್ ಸಂಸ್ಥೆಯ ಅಧ್ಯಕ್ಷರಾದ ಈಶ್ವರ ಪಟ್ಟಣಶೆಟ್ಟಿ, ಶಿಬಿರದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೀರೀಶ ಶೆಟ್ಟಿ, ಚಿದಂಬರ ಪಿ. ನಿಂಬರಗಿ, ರಾಜಪ್ಪ ಎಂ., ರೂಪಾ ಬಿದರಿಮಠ, ಸರನಾ ಪೋಲಿ, ಉದಯಕುಮಾರ, ಪರಮೇಶ ಕುಲಗೊಡ, ಹನೀಫ್ ಚಿಕ್ಕೇರಿ ಉಪಸ್ಥಿತರಿದ್ದರು. ನಾಗರತ್ನಾ ಕುಂಬಾರ ನಿರೂಪಿಸಿದರು. ಸೈಯದ ನದಾಫ್ ವಂದಿಸಿದರು.