ಮದ್ಯಪಾನ ದೇಶರಾಜ್ಯದ ಪ್ರಗತಿಗೆ ಮಾರಕವಾಗಿದೆ: ಮಠದ

ಲೋಕದರ್ಶನವರದಿ

ರಾಣೇಬೆನ್ನೂರು 11:  ಈ ದೇಶದ ಹಾಗೂ ರಾಜ್ಯದ ಪ್ರಗತಿಗೆ ಮತ್ತು ಸಮಾಜಕ್ಕೆ ಮಾರಕವಾಗಿರುವ ಮದ್ಯಪಾನವನ್ನು ಕೇಂದ್ರ-ರಾಜ್ಯ ಸರಕಾರಗಳು ನಿಷೇಧ ಮಾಡಬೇಕು. ಅದಕ್ಕೆ ಜನಜಾಗೃತಿಯ ಮೂಲಕ ಆಂದೋಲನವನ್ನು ಸಹ ಮಾಡಬೇಕಿದೆ ಎಂದು  ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಸಾಮಾಜಿಕ ಕಾರ್ಯಕರ್ತ ಜೆಎಂ ಮಠದ ಆಗ್ರಹಿಸಿದರು.

   ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೇರಳ, ಗುಜರಾತ ಮತ್ತಿತರ ರಾಜ್ಯಗಳಲ್ಲಿ ಮದ್ಯಪಾನವನ್ನು ಆಯಾ ಸರಕಾರಗಳು ನಿಷೇಧ ಮಾಡಿವೆ. 

   ಸಮಾಜದ ಹಾಗೂ ಮಹಿಳೆಯರ ಹಿತದೃಷ್ಠಿಯಿಂದ ಈ ನಿಷೇಧ ಅನಿವಾರ್ಯವಾಗಿದೆ. ಇದರಿಂದ ಲಕ್ಷಾಂತರ ಹೆಣ್ಣು  ಮಕ್ಕಳ ಭವಿಷ್ಯ ಉಜ್ವಲಗೊಳ್ಳುವುದರ ಜೊತೆಗೆ ರಾಜ್ಯದ ಅಭಿವೃದ್ದಿಯೂ ಆಗುವುದು ಎಂದರು.

     ಮದ್ಯಪಾನದ ನಿಷೇಧದ ಬಗೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬಹಳಷ್ಟು ಹೋರಾಟ ಮಾಡಿದ್ದರು. ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳ ಮೂಲಕ ಜನಜಾಗೃತಿಗೆ ಮುಂದಾಗಿದ್ದ ಗಾಂಧೀಜಿಯವರು ಮದ್ಯಪಾನ ನಿಮರ್ೂಲನೆಗೆ ಕಳಕಳಿಯ ಜೊತೆಗೆ ಹೋರಾಟದ ಕುರಿತು ತಿಳಿಸಿದ್ದರು. ದೇಶದ ಉದ್ದಾರ ಮದ್ಯಪಾನದ ನಿಮರ್ೂಲನೆಯಿಂದ ಸಾಧ್ಯ ಎಂದವರು ಹೇಳುತ್ತಿದ್ದರು ಎಂದರು.

   ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅನೇಕ ಹೊಸ ಸಮಸ್ಯೆಗಳು ಉಲ್ಬಣವಾಗುತ್ತಿದ್ದು, ನಿರುದ್ಯೋಗ ಸಮಸ್ಯೆಯಂತೂ ದೇಶದ ಆಥರ್ಿಕತೆಯ ಮೇಲೆ ಬಹಳಷ್ಟು ಮಾರಕವಾದ ಪರಿಣಾಮ ಬೀರಿದೆ. ಕೇಂದ್ರ-ರಾಜ್ಯ ಸರಕಾರಿ ನೌಕರರ ನಿವೃತ್ತಿ ವಯಸ್ಸು 58ಕ್ಕೆ ಇಳಿಸಿದರೆ ಮಾತ್ರ ನಿರುದ್ಯೋಗ ಸಮಸ್ಯೆಯೇ ಉದ್ಬವವಾಗದು  ಎಂದವರು ಸ್ಪಷ್ಠಪಡಿಸಿದರು.