ಮುಂಬೈ, 22 ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಬೆಳೆ ನಷ್ಟದ ಹಾನಿಯನ್ನು ಅಂದಾಜು ಮಾಡಲು ಮೂವರು ಸದಸ್ಯರ ಕೇಂದ್ರ ಅಧ್ಯಯನ ತಂಡ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಲಿದೆ. ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಆರ್ಪಿ.ಸಿಂಗ್ ನೇತೃತ್ವದ ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಇಂದು ನಾಗಪುರ, ಅಮರಾವತಿ ವಲಯಕ್ಕೆ ಭೇಟಿ ನೀಡಿ ಅಕಾಲಿಕ ಭೇಟಿಯಿಂದ ಆಗಿರುವ ಬೆಳೆ ಹಾನಿ ಪರಿಸ್ಥಿತಿಯನ್ನು ಖುದ್ದಾಗಿ ಅಧ್ಯಯನ ಮಾಡಲಿದ್ದಾರೆ. ಕಳೆದ ತಿಂಗಳು ಸುರಿದ ಧಾರಾಕಾರ ಮತ್ತು ಅಕಾಲಿಕ ಮಳೆಯಿಂದ ಈ ವಲಯದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿ ರೈತರು ವಿಪರೀತ ತೊಂದರೆಗೆ ಒಳಗಾಗಿದ್ದಾರೆ. ವಿಧಾನಸಭಾ ಚುನಾವಣೆಯ ಕಾರಣ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ರೈತರ ನೆರವಿಗೆ ಧಾವಿಸುವಲ್ಲಿ ವಿಳಂಬವಾಗಿತ್ತು. ಈ ನಡುವೆ ಅನೇಕ ರಾಜಕೀಯ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಬೆಳೆ ಕಳೆದುಕೊಂಡು ತೊಂದರೆಗೆ ಸಿಲುಕಿರುವ ರೈತರ ನೆರವಿಗೆ ಸಕರ್ಾರ ಧಾವಿಸಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಅಧ್ಯಯನ ತಂಡ ಇಂದು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದೆ