ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಕೇಂದ್ರ ಆದೇಶ

ನವದೆಹಲಿ, ಮಾ 23, ಕರೋನ ಸೋಂಕು  ತಡೆಯಲು  ಲಾಕ್ಡೌನ್ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಕೇಂದ್ರ ಸರಕಾರ ಇಂದು ಎಲ್ಲ ರಾಜ್ಯ ಸರಕಾರಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಲಾಕ್ಡೌನ್ ನಿರ್ಬಂಧವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು 400ಕ್ಕೂ ಅಧಿಕ ಜನರಿಗೆ ಹಬ್ಬಿರುವ ಕೊರೋನ ಸೋಂಕು  ತಡೆಗಟ್ಟಲು ದೇಶಾದ್ಯಂತ 80 ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದ್ದ ಮರುದಿನವೇ  ನಿರ್ಬಂಧ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ ನೀಡಿದೆ. ಹೆಚ್ಚಿನ ಜನರು ಲಾಕ್ಡೌನ್ನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದ್ದರು. ಜನತೆ ಆದೇಶವನ್ನು ಪಾಲಿಸುವುದನ್ನು ಆಯಾ ರಾಜ್ಯ ಸರಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದೂ ಕೇಂದ್ರ ಸೂಚನೆ ಕೊಟ್ಟಿದೆ .