ಕೇಂದ್ರ ಸರ್ಕಾರ ರೈತರಿಗೆ ಬೀಜ ಗೊಬ್ಬರ ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಬೇಕು : ಶಾಸಕ ಪಠಾಣ

ಕೇಂದ್ರ ಸರ್ಕಾರ ರೈತರಿಗೆ  ಬೀಜ ಗೊಬ್ಬರ ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಬೇಕು : ಶಾಸಕ ಪಠಾಣ Central government should supply seeds and fertilizers to farmers in a proper manner: MLA Pathana

ಲೋಕದರ್ಶನ ವರದಿ 

ಶಿಗ್ಗಾವಿ  17: ಕೇಂದ್ರ ಸರಕಾರ ತನ್ನ ಅಸಮರ್ಥತೆಯನ್ನು ದೇಶಭಕ್ತಿ ಎಂದು ಬಿಂಬಿಸಿಕೊಂಡು ಜನರ ಮೇಲೆ ಅದರ ಹೊರೆ ಹಾಕುತ್ತಿದೆ. ಈಗ ರೈತರಿಗೆ ಅವಶ್ಯವಿರುವ ಬೀಜ ಮತ್ತು ಗೊಬ್ಬರವನ್ನು ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಆಗ್ರಹಿಸಿದರು.    ಪಟ್ಟಣದ ಎಪಿಎಂಸಿಯಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡೀಸೆಲ್, ಪೆಟ್ರೋಲ್ ಇಲ್ಲದೇ ಜನತೆ ಕೆಲಸ ಮಾಡಲು ಸಾಧ್ಯವಿಲ್ಲ. 

ಸೋಯಾಬೀನ್, ಶೇಂಗಾ, ಗೋವಿನಜೋಳ ಸೇರಿದಂತೆ ನಮ್ಮಲ್ಲಿ ಕ್ರಾಪ್ಟ್‌ ಬೆಳೆಗಳಿಗೆ ಬೀಜ ದಾಸ್ತಾನು ಚೆನ್ನಾಗಿದೆ. ಬೀಜಗಳ ಪೂರೈಕೆಯ ಜವಾಬ್ದಾರಿ ನಮ್ಮ ರಾಜ್ಯ ಸರಕಾರದ್ದಾಗಿದ್ದು ಅದನ್ನು ಯಾವುದೇ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತದೆ. ಆದರೆ ಗೊಬ್ಬರ ಪೂರೈಕೆಯ ಜವಾಬ್ದಾರಿ ಕೇಂದ್ರ ಸರಕಾರದಾಗಿದ್ದು ಗೊಬ್ಬರದ ಪೂರೈಕೆಯಲ್ಲಿ ತೊಂದರೆಯಾದರೆ ಕೇಂದ್ರ ಸರಕಾರ ಪರಿಹಾರ ನೀಡಬೇಕು.

ಯಾಸೀರ್‌ಖಾನ್ ಪಠಾಣ ಶಾಸಕ. 

 ಬಂಗಾರವಿಲ್ಲದೇ ಮದುವೆ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮೋದಿಯವರು ಗೊಬ್ಬರ ಉಪಯೋಗಿಸಬೇಡಿ, ಸೆಗಣಿಯ ಗೊಬ್ಬರ ಅಷ್ಟೇ ಉಪಯೋಗಿಸಿ ಎಂದು ಹೇಳಿದರೆ ಹೇಗೆ? ಎಂಬ ಭಯ ಈಗಲೇ ನಮಗೆ ಮತ್ತು ನಮ್ಮ ರೈತರಿಗೆ ಕಾಡುತ್ತಿದೆ ಎಂದು ಕಾಲೆಳೆದರು.    ನಮ್ಮ ತಾಲೂಕಿನ ಕೃಷಿ ಅಧಿಕಾರಿಗಳು ತಾಲೂಕಿನಲ್ಲಿ ಬೀಜದ ಜೊತೆಗೆ ಗೊಬ್ಬರದ ದಾಸ್ತಾನು ಮಾಡಿಕೊಳ್ಳಬೇಕು. ತಾಲೂಕಿನಲ್ಲಿಯ ಉಪಯೋಗವಾಗಬೇಕು. ಬೇರೆ ತಾಲೂಕಿಗೆ ಸರಬರಾಜಿನ ಕುರಿತು ಗಮನಕ್ಕೆ ಬಂದರೆ ಕ್ರಮ ಖಂಡಿತ ಎಂದರು.    ರೈತರಿಗೆ ರಾಜ್ಯ ಸರಕಾರ ಗೊಬ್ಬರ, ಡಿಸೇಲ್, ಬಂಗಾರ ಯಾವುದನ್ನೂ ಕೊಡುವುದಿಲ್ಲ. ಕೇಂದ್ರ ಸರಕಾರ ಮಾತ್ರ ಇದೆಲ್ಲವನ್ನು ಕೊಡುತ್ತದೆ. ಆದ್ದರಿಂದ ಕೇಂದ್ರ ಸರಕಾರ ಬಹಳಷ್ಟು ಗಿಮಿಕ್ ಮಾಡಿ ತನ್ನ ಅಸಮರ್ಥತೆಯನ್ನು ರಾಜ್ಯ ಸರಕಾರದ ಮೇಲೆ ಹಾಕಲು ಮತ್ತು ಜನರ ಮೇಲೆ ಹೇರಲು ಪ್ರಯತ್ನಿಸುತ್ತದೆ ಎಂದರು.    ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಕೃಷಿ ಅಧಿಕಾರಿ ಕೊಟ್ರೇಶಿ ಗೆಜ್ಜಲಿ, ಗುಡ್ಡಪ್ಪ ಜಲದಿ, ಹನುಮರೆಡ್ಡಿ ನಡುವಿನಮನಿ, ಶಂಕರಗೌಡ ಪಾಟೀಲ, ಗೌಸಖಾನ್ ಮುನಶಿ, ಚಂದ್ರು ಕೊಡ್ಲಿವಾಡ, ಮುನ್ನಾ ಲಕ್ಷೇಶ್ವರ. ವಸಂತಾ ಬಾಗೂರ, ರೈತ ಮುಖಂಡರಾದ ಬಸಲಿಂಗಪ್ಪ ನರಗುಂದ, ಮಂಜುನಾಥ ಹಾವೇರಿ, ಈರಣ್ಣ ಸಮಗೊಂಡ, ಶಂಕರಗೌಡ ಪಾಟೀಲ, ಆನಂದ ಕೇಳಗಿನಮನಿ ಸೇರಿದಂತೆ ಇತರರು ಇದ್ದರು.