ಅಥಣಿ 11: ಕೇಂದ್ರ ಸರಕಾರ ಡಿಸೈಲ್ ಮೇಲಿನ ತೆರಿಗೆ ಮತ್ತು ಟೈಯರ್ ಸೇರಿದಂತೆ ಬಸ್ ಗಳಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳ ಮೇಲಿನ ಜಿ.ಎಸ್.ಟಿ ಕಡಿಮೆ ಮಾಡಬೇಕು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಿಗೆ ಟೋಲ್ ವಸೂಲಿ ನಿಲ್ಲಿಸಿದಲ್ಲಿ ಬಸ್ ದರ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸ್ಥಳೀಯ ಹಳೆ ತಹಶೀಲ್ದಾರ ಕಛೇರಿ ಆವರಣದಲ್ಲಿ ಸರ್ವೇ ಮತ್ತು ನೊಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟೀಲೀಕರಣಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಿರಂತರವಾಗಿ ಡಿಸೈಲ್ ಏರಿಕೆಯಾಗುತ್ತಿರುವ ಪರಿಣಾಮ ಈಗಿದ್ದ ದರದಲ್ಲಿ ಬಸ್ ನಿರ್ವಹಣೆ, ಹೊಸ ಬಸ್ ಗಳ ಖರೀದಿ, ಸಂಬಳ ಸೇರಿದಂತೆ ಇತರೆ ಖರ್ಚುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಅನಿವಾರ್ಯವಾಗಿ ಬಸ್ ದರ ಏರಿಕೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಅನೇಕ ವರ್ಷಗಳಿಂದ ನಕ್ಸಲ್ ಸಮಸ್ಯೆ ಇತ್ತು ಇದರಿಂದ ಅಮಾಯಕರು ಮತ್ತು ಪೊಲೀಸರು ಕೂಡ ಸಾವನ್ನಪ್ಪಿದ್ದರು ಹೀಗಾಗಿ ಶಾಶ್ವತವಾಗಿ ನಕ್ಸಲ್ ಸಮಸ್ಯೆಯನ್ನು ಬಗೆ ಹರಿಸಬೇಕು ಎನ್ನುವ ಕಾರಣದಿಂದ ರಾಜ್ಯ ಸರಕಾರ ನಕ್ಸಲ್ ರನ್ನು ಶರಣಾಗತಿ ಮಾಡುವ ಕಾರ್ಯಕ್ಕೆ ಮುಂದಾದ ಪರಿಣಾಮ ವಿಶೇಷ ಪ್ಯಾಕೇಜ್ ಘೋಷಿಸಿ 6 ನಕ್ಸಲ್ ರನ್ನು ಶರಣು ಮಾಡಿಕೊಂಡು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ ಎಂದ ಅವರು ನಕ್ಸಲ್ ರು ಶರಣಾಗಿದ್ದರಿಂದ ರಾಜ್ಯದಿಂದ ನಕ್ಸಲ್ ಸಮಸ್ಯೆ ಕಿತ್ತಿ ಒಗೆಯಲಾಗಿದೆ ಎಂದರು.
ಹಳೆಯ ಮತ್ತು ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಡಿಜಿಟಲ್ ದಾಖಲೆಗಳಾಗಿ ಪರಿವರ್ತನೆ, ರೆಕಾರ್ಡ ಕೋಣೆಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆಗಾಗಿ, ಹಳೆಯ ದಾಖಲೆಗಳ ಕಳುವಾಗದಂತೆ ಮತ್ತು ತಿದ್ದುಪಡಿಯಾಗದಂತೆ ಸಂರಕ್ಷಣೆ ಮಾಡುವ ಉದ್ದೇಶದಿಙದ, ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ, ದಾಖಲೆಗಳನ್ನು ನೇರವಾಗಿ ತಲುಪಿಸುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದ ಅವರು ದಾಖಲೆಗಳ ಪೂರೈಕೆಯಲ್ಲಿ ವಿಳಂಬ, ಅಡತಡೆಗಳನ್ನು ಆಲಿಸಿ ತ್ವರಿತ ಆಡಳಿತ ಸೇವೆಯನ್ನು ಒದಗಿಸುವ ಪ್ರಯತ್ನ ಇದಾಗಿದ್ದು, ಉತ್ತಮ ಮತ್ತು ಜನಪರ ಆಡಳಿತ ನೀಡುವುದೇ ಈ ಯೋಜನೆಯ ಉದ್ದೇಶ ಆಗಿದೆ ಎಂದರು. ಕಂದಾಯ ಸಚಿವ ಕೃಷ್ಣ ಭೈರೇಗೌಡರು ಮೊದಲ ಹಂತದಲ್ಲಿ 30 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಿದ್ದರು ಈ ತಾಲೂಕುಗಳಲ್ಲಿ ಈ ಯೋಜನೆ ಯಶಸ್ವಿಯಾದ ನಂತರ ಎಲ್ಲ ತಾಲೂಕುಗಳಿಗೂ ವಿಸ್ತರಿಸಲಾಗಿದೆ ಎಂದ ಅವರು ಪಹಣಿ ಪತ್ರಿಕೆಯಂತೆ ರಾಜ್ಯದ ಯಾವ ಭಾಗದಲ್ಲಿಯೂ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಿದ್ರಾಯ ಭೊಸಗಿ, ಉಪತಹಶಿಲ್ದಾರಾದ ಮಹಾದೇವ ಬಿರಾದಾರ, ಬಿ ಡಿ ಗುಡಮೆ, ಶಿರಸ್ತೆದಾರರಾದ ಜಿ ಎಸ್ ಗುಡೋಡಗಿ, ಅಮೀತ ಡವಳೇಶ್ವರ, ಶೌಕತ ಯತ್ನಟ್ಟಿ, ಹರೀಶ ಕುಲಕರ್ಣಿ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾದ್ಯಕ್ಷೆ ಭುವನೇಶ್ವರಿ ಯಕಂಚಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸಹಕಾರ ಇಲಾಖೆಯ ರಾಘವೇಂದ್ರ ನೂಲಿ, ಕಂದಾಯ ಇಲಾಖೆಯ ಎಸ್ ಬಿ ಮೆಣಸಂಗಿ, ಎಮ್ ಎಮ್ ಮಲ್ಲಖಾನ, ಎಮ್ ಎಮ್ ಮಿರ್ಜಿ, ಸುಮೀತ್ ಮರನೂರ, ಜ್ಯೋತಿಬಾ ಅಕ್ಕೋಳ, ವಿಷ್ಣು ಪೂಜಾರಿ, ಹಣಮಂತ ಕುಂಬಾರ, ಸೇರಿದಂತೆ ಪುರಸಭೆ ಸದಸ್ಯರಾದ ರಾಜು ಗುಡೋಡಗಿ, ಮಲ್ಲಿಕರ್ಜುನ ಬುಟಾಳಿ, ಕಲ್ಲೇಶ ಮಡ್ಡಿ,ಸೇರಿದಂತೆಮುಂಖಡರಾದ ಬಸವರಾಜ ಮರನೂರ, ಮಲ್ಲು ಕುಳೋಳ್ಳಿ, ಮಂಜುನಾಥ ಎಚ್, ಜಡೆಪ್ಪಾ ಕುಂಬಾರ, ಪ್ರದೀಪ ನಂದಗಾಂವ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು