ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಲು ಸಂಚು ನಡೆಸಿದೆ : ದಿನೇಶ್ ಗುಂಡೂರಾವ್

  ಮೈಸೂರು ,ಅ 19 : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜನರಿಗೆ ಅವರು ಅರ್ಥವಾಗಿರಲಿಲ್ಲ.ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ಜನ ಅವರನ್ನು ಅರ್ಥ ಮಾಡಿಕೊಂಡರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದರು. 

  ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಕನರ್ಾಟಕದ ಎಲ್ಲ ಭಾಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರು ಒಳ್ಳೆಯ ತೀಮರ್ಾನ ಕೈಗೊಂಡಿದ್ದಾರೆ ಎಂದರು. 

   ಚುನಾವಣೆಯಲ್ಲಿ ಜನ ಅಭಿವೃದ್ಧಿ ನೋಡಿ ಮತ ಹಾಕಿಲ್ಲ.ಕೆಲವರಿಗೆ ಯಾವುದು ದೊಡ್ಡ ವಿಚಾರ ಎಂದು ಗೊತ್ತೆ ಆಗಲಿಲ್ಲ.ಲಿಂಗಾಯತ ಧರ್ಮದ ವಿಚಾರ,ಟಿಪ್ಪು ಜಯಂತಿ,ಸದಾಶಿವ ಆಯೋಗದ ವಿಚಾರವನ್ನೇ ದೊಡ್ಡ ವಿಚಾರ ಎಂದು ಬಿಂಬಿಸಿದರು.ಇವೆಲ್ಲ ದೊಡ್ಡ ವಿಚಾರ ಗಳಾ? ಜನರ ಬದುಕಿಗೆ ಇವುಗಳಿಂದ ಸಂಬಂಧ ಇದೆಯಾ? ಎಂದು ಗುಂಡೂರಾವ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

 ಬಿಜೆಪಿ ಅವರು ಚುನಾವಣೆ ಸಮಯದಲ್ಲಿ ಸುಮ್ಮನೆ ಸುಳ್ಳು ಪ್ರಚಾರ ಮಾಡಿ ಜನರ ತಲೆ ಕೆಡಿಸಿದರು. ಮೈತ್ರಿ ಸಕರ್ಾರವನ್ನು ಬೀಳಿಸಿ ಕುತಂತ್ರದಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದರು.ಇದೆನ್ನೆಲ್ಲ ನೋಡಿದ ಜನರು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತಾರೆ ಎಂದು ಅವರು ಭವಿಷ್ಯ ನುಡಿದರು. 

  ಇನ್ನು ಬಿಜೆಪಿ ಅವರು ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ಸಂಚು ಮಾಡಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಇತ್ತೀಚಿಗೆ ಸಿದ್ದರಾಮಯ್ಯ ಅವರ ಮೇಲೂ ಕೇಂದ್ರ ಸಕರ್ಾರ ಐಟಿ ಛೂ ಬಿಡಲು ಸಂಚನ್ನು ರೂಪಿಸುತ್ತಿದೆ. ಮೋದಿ, ಅಮೀತ್ ಷಾ ಇಬ್ಬರು ಸಿದ್ದರಾಮಯ್ಯರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನ ಮಾಡಿದರೆ ನಿಮಗೆ ಗತಿ ಕಾಣಿಸಬೇಕಾಗುತ್ತದೆ ಎಂದು ಗುಂಡೂರಾವ್ ಅವರು ಮೋದಿ, ಅಮೀತ್ ಶಾ ಅವರಿಗೆ ಎಚ್ಚರಿಕೆ ನೀಡಿದರು. 

 ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಹಾಯಕರಾಗಿದ್ದಾರೆ.ಏನು ಕೇಳಿ ದರು ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಅವರು ಅಸಹಾಯಕತೆ ತೋರುತ್ತಿದ್ದಾರೆ. ಅಧಿಕಾರ ನಡೆಸಲು ನಿಮಗೆ ಸಾಧ್ಯವಾಗಲಿಲ್ಲ ಎಂದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಹೋಗಿ.ನಮ್ಮವರಿಗೆ ದುಡ್ಡು ಹೇಗೆ ತರಬೇಕು ಎಂಬುದು ಗೊತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.