ನವದೆಹಲಿ, ಮಾ ೨೬, ಕೊರೊನಾ ವೈರಸ್ ವಿಪತ್ತಿನಿಂದ ದೇಶದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುವಂತೆ ಮಾಡಲು ಕೇಂದ್ರ ಸರ್ಕಾರ ೧.೭೦ ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದೆ ಈ ಸಂಬಂಧ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ನಡೆಸಿದ ಮಾಧ್ಯಮ ಸಮೀಕ್ಷೆಯಲ್ಲಿ ಹಲವು ಪ್ರಮುಖ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಉಪಶಮನ ಕ್ರಮಗಳು
1 ಕೊರೊನಾ ಪ್ಯಾಕೇಜ್ ಅಡಿಯಲ್ಲಿ ಬರುವ ಬಡವರಿಗೆ ೧.೭ ಲಕ್ಷ ಕೋಟಿ ರೂಪಾಯಿ ನೆರವು.
2 ಪ್ರಧಾನಿ ಗರಿಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ನೆರವು.
3 ಕೊರೊನಾ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಹಾಯಕರಿಗೆ ೫೦ ಲಕ್ಷ ಆರೋಗ್ಯ ವಿಮೆ.
4 ಪ್ರಧಾನಿ ಗರಿಬ್ ಕಲ್ಯಾಣ್ ಆನ್ ಯೋಜನೆ ಮೂಲಕ ೩ ತಿಂಗಳವರೆಗೆ ೮೦ ಕೋಟಿ ಮಂದಿಗೆ ಪಡಿತರ ವಿತರಣೆ.
5 ಈಗ ನೀಡುತ್ತಿರುವ ೫ ಕೆಜಿಗೆ ಹೆಚ್ಚುವರಿಯಾಗಿ ೫ ಕೆಜಿ ಅಕ್ಕಿ ಅಥವಾ ಗೋಧಿ ಪೂರೈಕೆ.
6 ಇವುಗಳ ಜತೆಗೆ ಒಂದು ಕೆಜಿ ದ್ವಿದಳ ಧಾನ್ಯ ಸಹ ಪೂರೈಸಲಾಗುವುದು.
ಬಡವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ.
7 ಪಿಎಂ ಕಿಸಾನ್ ಯೋಜನೆಯಡಿ ಅವರ ಅಡಿಯಲ್ಲಿ, ಸರ್ಕಾರ ಈಗಾಗಲೇ ರೈತರಿಗೆ ವರ್ಷಕ್ಕೆ ೬,೦೦೦ ರೂ ನೀಡುತ್ತಿದೆ.
8 ಮೊದಲ ಕಂತಾಗಿ ೨ ಸಾವಿರೂಪಾಯಿ ಹಣವನ್ನು ರೈತರ ಖಾತೆಗಳಿಗೆ ತಕ್ಷಣ ಜಮಾಗೊಳಿಸಲು ನಿರ್ಧರಿಸಿದೆ.