ಲೋಕದರ್ಶನ ವರದಿ
ರಾಮದುರ್ಗ, 7: ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಜೊತೆಗೆ ತಮ್ಮನ್ನು ಹಾಗೂ ತಮ್ಮ ಮನೆಯನ್ನು ಖದೀಮರಿಂದ ರಕ್ಷಿಸಿಕೊಳ್ಳವು ಸೂತ್ರ ಅರಿತುಕೊಂಡಾಗ ಮಾತ್ರ ಅಪರಾಧಗಳ ಸಂಖ್ಯೆ ಇಳಿಮುಖಗೊಳ್ಳುತ್ತದೆ ಎಂದು ಪಿಎಸ್ಐ ರಾಮನಗೌಡ ಸಂಕನಾಳ ಹೇಳಿದರು.
ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಘಟಕನೂರ ವಲಯದ ಹಂಪಿಹೊಳಿ ಸಂಪಿಗೆ ಗುಂಪಿನ ವಾಷರ್ಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪೋಲೀಸ್ ಇಲಾಖೆಯ ಸಾರ್ವಜನಿಕ ಜನಸ್ಹೇಹಿಯಾಗಿ ಕೆಲಸ ಮಾಡುತ್ತಿದೆ. ಯುವ ಪೀಳಿಗೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಪಾಲಕರು ತಿಳುವಳಿಕೆ ನೀಡಿ, ಅವರನ್ನು ಸರಿದಾರಿಗೆ ತರಬೇಕೆಂದು ತಿಳಿಸಿದ ಅವರು, ಮಹಿಳೆಯರಲ್ಲಿ ಸಾಮಾಜಿಕ ಅರಿವು ಮೂಡಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ಸತೀಶ ಎಂ. ಮಾತನಾಡಿ, ಜ್ಞಾನ ವಿಕಾಸದ ಜೊತೆಗೆ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಅವರಿಗೆ ಸುಸಂಸ್ಕೃತ ಬದುಕಿನ ಮಾರ್ಗದರ್ಶನ ನೀಡಲು ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಬಾನ ಹೊರ ಪೋಲೀಸ್ ಠಾಣೆಯ ಠಾಣಾಧಿಕಾರಿ ಬಸವರಾಜ ರಂಗನ್ನವರ ಗ್ರಾ.ಪಂ ಸದಸ್ಯೆ ಪಾರ್ವತೆವ್ವ ಸೇರಿದಂತೆ ಇತರರಿದ್ದರು.
ಧರ್ಮಸ್ಥಳ ಸಂಘದ ಸಮನ್ವಯಾಧಿಕಾರಿ ಸರಸ್ವತಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ವಿದ್ಯಾ ನಿರೂಪಿಸಿ, ವಂದಿಸಿದರು