ಗುಣಮಟ್ಟದ ಕನ್ನಡ ಕಲಿಕೆ ನಿಯಮಾವಳಿಗೆ ಸೂಕ್ತ ತಿದ್ದುಪಡಿ ತರಲು ಕೇಂದ್ರೀಯ ಕನ್ನಡ ಅಧ್ಯಾಪಕರ ಸಂಘ ಆಗ್ರಹ

ಬೆಂಗಳೂರು,ಜ.27:        ಗುಣಮಟ್ಟದ ಕನ್ನಡ ಕಲಿಕೆಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕೇಂದ್ರೀಯ ಕನ್ನಡ ಅಧ್ಯಾಪಕರ ಸಂಘ ಒತ್ತಾಯಿಸಿದೆ.

ಈ ಕುರಿತು ಇಂದು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಡಾ. ನಾಗೇಂದ್ರಸ್ವಾಮಿ ಚಿದರವಳ್ಳಿ ಪ್ರಸ್ತುತ 9 ಮತ್ತು 10ನೇ ತರಗತಿಗಳಲ್ಲಿರುವ ದ್ವಿಭಾಷಾ ಕಲಿಕಾ ನೀತಿ, ಐಸಿಎಸ್‍ಸಿ ಹಾಗೂ ಸಿಬಿಎಸ್‍ಸಿ ಪಠ್ಯಪುಸ್ತಕದಲ್ಲಿರುವ ವ್ಯತ್ಯಾಸಗಳು ಕೇಂದ್ರದ ಅಧೀನದಲ್ಲಿರುವ ನವೋದಯ ಶಾಲೆಗಳಲ್ಲಿ ತ್ರಿಭಾಷಾ ಪದ್ಧತಿ, ಸಹಭಾಷೆ ತೆಗೆದುಕೊಳ್ಳುವ ವಿಚಾರದಲ್ಲಿ ಗೊಂದಲಗಳಿದ್ದು, ಇದನ್ನು ನಿವಾರಿಸಲು ಭಾಷಾ ಕಲಿಕಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ಅಗತ್ಯವಾಗಿದೆ ಎಂದು ಹೇಳಿದರು.