ನವದೆಹಲಿ, ಫೆ 5, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಟ್ರಸ್ಟ್ ರಚನೆ ಮಾಡುವುದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಸುಪ್ರೀಂ ಕೋರ್ಟ್ ಬಹುಕಾಲದ ಮಂದಿರ ವಿವಾದ ಪರಿಹಾರ ಮಾಡಿದ್ದು, ಮೂರು ತಿಂಗಳ ಒಳಗೆ ಟ್ರಸ್ಟ ರಚನೆ ಮಾಡುವಂತೆ ಕೇಂದ್ರ ಕ್ಕೆ ಸೂಚನೆ ನೀಡಿತ್ತು.ಬ್ಯಾಂಕುಗಳ ವಿಲೀನಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು (ಪಿಎಸ್‌ಬಿ) ನಾಲ್ಕು ಬ್ಯಾಂಕುಗಳನ್ನಾಗಿ ಪರಿವರ್ತಿಸಿ, ವಿಲೀನ ಮಾಡುವ ಮಹತ್ವದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಲಿದೆ ಎಂದು ಉನ್ನತ ಮೂಲಗಳು ಹೇಳಿವೆ ಈ ಮೊದಲು ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕು ಗಳನ್ನು ವಿಲೀನ ಮಾಡುವ ಮಹತ್ವ ತೀರ್ಮಾನ ತೆಗೆದುಕೊಂಡಿತ್ತು .