ಕೇಂದ್ರ ಪುರಷ್ಕೃತ ಯೋಜನೆಗಳು ಸದುಪಯೋಗವಾಗಲಿ: ಸಂಸದ ಗದ್ದಿಗೌಡರ

ಬಾಗಲಕೋಟೆ: ಕೇಂದ್ರ ಸರಕಾರ ಜಾರಿಗೆ ತರಲಾದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳು ಫಲಾನುಭವಿಗಳಿಗೆ ಸದುಪಯೋಗವಾಗುವಂತೆ ಮಾಡಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಪ್ರಸಕ್ತ ಸಾಲಿನ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರ ದೇಶದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬರದೇ ಇದ್ದಲ್ಲಿ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಂದು ಯೋಜನೆಗಳ ಲಾಭ ಫಲಾನುಭವಿಗಳಿಗೆ ದೊರೆತಾದ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಲು ತಿಳಿಸಿದರು. 

      ಸ್ವಚ್ಛ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿಮರ್ಾಣಕ್ಕೆ 10764 ಗುರಿ ಇದ್ದು, ಈ ಪೈಕಿ 3631 ನಿಮರ್ಿಸಲಾಗಿದೆ. 7133 ಬಾಕಿ ಉಳಿದಿದೆ. 689.78 ಲಕ್ಷ ಅನುದಾನ ಪೈಕಿ 466.85 ಲಕ್ಷ ಖಚರ್ು ಮಾಡಲಾಗಿದೆ ಎಂದು ಜಿ.ಪಂ ಯೋಜನಾ ನಿದರ್ೇಶಕರು ಸಭೆಗೆ ತಿಳಿಸಿದಾಗ ಶೌಚಾಲಯ ನಿಮರ್ಿಸಿಕೊಂಡವರು ಸಂಪೂರ್ಣವಾಗಿ ಬಳಕೆಯಾಗುವಂತೆ ಮಾಡಬೇಕು. ಸಮುದಾಯ ಶೌಚಾಲಯಗಳನ್ನು ನಿಮರ್ಿಸಿದಲ್ಲಿ ಅವುಗಳ ನಿರ್ವಹಣೆಯಾಗಬೇಕು. ಪಂಚಾಯತಿ ಹಂತದಲ್ಲಿ ಗ್ರಾಮ ಪ್ರತಿಯೊಂದು ಮನೆಗಳಲ್ಲಿ ಶೌಚಾಲಯಗಳ ಇದ್ದ ಬಗ್ಗೆ ಹಾಗೂ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಗದ್ದಿಗೌಡರ ತಿಳಿಸಿದರು.

     ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ ಸಮುದಾಯ ಶೌಚಾಲಯಕ್ಕೆ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಸಿದರೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಸಭೆಗೆ ತಿಳಿಸಿದಾಗ ಪ್ರತಿಯೊಬ್ಬ ಸಭೆಯಲ್ಲಿ ಉಪಸ್ಥಿತರಿದ್ದ ತಾ.ಪಂ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಶೌಚಾಲಯಗಳಿಲ್ಲದ ಮನೆಗಳಿಗೆ ಶೌಚಾಲಯ ನಿಮರ್ಿಸುವುದು. ಪ್ರತಿ ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿವುದು, ಗುಂಪು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಕೆಯಾಗುವಂತೆ ಮಾಡಿ ಮಾದರಿ ಸದಸ್ಯರಾದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು. 

       ಘನ ತ್ಯಾಜ್ಯ ಸಂಗ್ರಹಿಸಲಿಕ್ಕೆ ಪ್ರತಿ ಗ್ರಾಮ ಪಂಚಾಯತಿವಾರು ತಲಾ 20 ಲಕ್ಷ ಅನುದಾನವಿದ್ದು, ಸೂಕ್ತ ಸ್ಥಳಗುರುತಿಸಿ ತ್ಯಾಜ್ಯ ಸಂಗ್ರಹಣೆಗೆ ಕ್ರಮಕೈಗೊಳ್ಳಬೇಕು. 

     ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅತೀ ಕಡಿಮೆ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಫಲಾನುಭವಿಗಳು ಪಡೆಯುವಂತಾಗಬೇಕು. ಜಿಲ್ಲೆಯಲ್ಲಿ ವಸತಿ ರಹಿತಿ ಕುಟುಂಬಗಳು ಹಾಗೂ ಜಾಗ ಮತ್ತು ಮನೆ ಇಲ್ಲದ ಕುಟುಂಬಗಳ ಸವರ್ೆ ಕಾರ್ಯ ನಡೆಸಿ ಅಂತವರಿಗೆ ನಿಮರ್ಿಸಿಕೊಡುವ ಕೆಲಸವಾಗಬೇಕು. 2016-17 ರಿಂದ 2019-20 ವರೆಗೆ 3958 ಗುರಿ ಪೈಕಿ 2441 ಆಯ್ಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೌಸಿಂಗ್ ಸ್ಕಿಮ್ನಲ್ಲಿ 9226 ಮನೆಗಳ ಪೈಕಿ 3797 ಪೂರ್ಣಗೊಂಡಿದ್ದು, 2676 ಮನೆಗಳು ಇನ್ನು ಪ್ರಾರಂಭವೇ ಮಾಡದಿರುವದನ್ನು ತಿಳಿದು 2015 ರಿಂದ ಪ್ರಾರಂಭವಾಗಿದ್ದು ಶೀಘ್ರವೇ ಪೂರ್ಣಗೊಳಿಸಲು ಸಂಸದರು ಸೂಚಿಸಿದರು.

 ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿಗೆ 3097 ಹೆಕ್ಟೇರ್ ಪ್ರದೇಶಕ್ಕೆ ಅಳವಡಿಸಲಾಗಿ ಶೇ.41 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಧಾನಮಂತ್ರಿ ಕಿಸಾಮ ಸಮ್ಮಾನ ಯೋಜನೆಯಡಿ ಈಗಾಗಲೇ ಸಹಾಯಧನ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ವಿವಿಧ ಬೆಳೆಗಳಿಗೆ ವಿಮೆ ಒಳಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 28437 ರೈತರು ವಿಮೆಗೆ ನೊಂದಣಿ ಮಾಡಿಸಿದ್ದಾರೆ. ರಬಿಗೆ 19624 ರೈತರು ವಿಮೆಗೆ ಒಳಪಡಿಸಿರುತ್ತಾರೆ ಎಂದು ಜಂಟಿ ಕೃಷಿ ನಿದೇರ್ಶಕರು ಸಭೆಗೆ ತಿಳಿಸಿದರು. 

ಆಹಾರ ಇಲಾಖೆಯಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 106486 ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 36625 ಎಎವೈ, 371451 ಬಿಪಿಎಲ್ ಹಾಗೂ 53869 ಎಪಿಎಲ್ ಸೇರಿ ಒಟ್ಟು 461945 ಪಡಿತರ ಚೀಟಿಗಳನ್ನು ನೀಡಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 408076 ಪಡಿತರ ಚೀಟಿಗಳಿಗೆ ಶೇ.100 ರಷ್ಟು ಆಧಾರ ಸೀಡಿಂಗ್ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಂತೆ ಆಕ್ಷೇಪಣೆ, ವಿವರಣೆ ಹಾಗೂ ಮಾಹಿತಿ ಪಡೆಯಲು ನಿಶುಲ್ಕ ದೂರವಾಣಿ 1967 ಗೆ ಕರೆ ನೀಡಿ ಮಾಹಿತಿ ಪಡೆಯಲು ಅವಕಾಶವಿದೆ ಎಂದು ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು.

ನಂತರ  ದೀನ ದಯಾಳ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ, ರೇಷ್ಮೆ, ಅರಣ್ಯ, ಗ್ರಾಮೀಣ ಕುಡಿಯುವ ನೀರು, ವಸತಿ ಯೋಜನೆ ಸೇರಿದಂತೆ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನೆ ಮಾಡಿದರು. 

ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಆಯಾ ತಾಲೂಕಾ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.