ಸಿಧು ಪಾಕ್ ಭೇಟಿಗೆ ಇನ್ನೂ ಸಿಗದ ಕೇಂದ್ರದ ಅನುಮತಿ

ಇಸ್ಲಾಮಾಬಾದ್, ನ, 7:    ಕರ್ತಾಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ   ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಅಲ್ಲಿನ ಸರ್ಕಾರ ವೀಸಾ  ನೀಡಲು ಅನುಮತಿ ನೀಡಿದೆ. ನಾಳಿದ್ದು ಶನಿವಾರ ಬಹುನಿರೀಕ್ಷಿತ ಕರ್ತಾಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಿಧು ಸಂಸದನಾಗಿರುವ ಕಾರಣ ಪಾಕಿಸ್ತಾನ  ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದೆ  ಆದರೆ ಈ ಅನುಮತಿ ಸಿಧುಗೆ ಇನ್ನೂ ಲಭ್ಯವಾಗಿಲ್ಲಎನ್ನಲಾಗಿದೆ.  ಈ ಕಾರ್ಯಕ್ರಮದಲ್ಲಿ  ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ನೇತೃತ್ವದ ನಿಯೋಗ ಸಹ ಭಾಗಿಯಾಗಲಿದೆ. ದೇಶ- ವಿದೇಶಗಳ  ಸಿಖ್  ಯಾತ್ರಿಕರು ಗುರುನಾಕ್  ಅವರ ಜನ್ಮ  ದಿನೋತ್ಸದಲ್ಲಿ ಭಾಗಿಯಾಗಲು    ಕರ್ತಾರ್ ಪುರಕ್ಕೆ ಭೇಟಿ ನೀಡತ್ತಿದ್ದು,  ಪಾಕ್ ಸರಕರ ಅವರಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲಿದೆ.