ನವದೆಹಲಿ, ಮೇ 21, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸುಮಾರು 8 ಕೋಟಿ ವಲಸಿಗರಿಗೆ ಪ್ರತಿ ವ್ಯಕ್ತಿಗೆ ತಲಾ 5 ಕೆಜಿಯಂತೆ ಎರಡು ತಿಂಗಳ ಕಾಲ ಉಚಿತವಾಗಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.ಇದಕ್ಕಾಗಿ ಸುಮಾರು 2,982.27 ಕೋಟಿ ರೂ.ಗಳ ಆಹಾರ ಸಹಾಯ ಧನ ಒದಗಿಸಲಿದೆ. ಅಂತರ-ರಾಜ್ಯ ಸಾರಿಗೆ, ನಿರ್ವಹಣಾ ಶುಲ್ಕ ಮತ್ತು ವ್ಯಾಪಾರಿಗಳ ಲಾಭಾಂಶ / ಹೆಚ್ಚುವರಿ ವ್ಯಾಪಾರಿಗಳ ಲಾಭಾಂಶ ವೆಚ್ಚ ಸುಮಾರು 127.25 ಕೋಟಿ ರೂ.ಗಳಾಗಿದ್ದು, ಈಹಣವನ್ನೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಭರಿಸಲಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಒಟ್ಟು ಸಹಾಯಧನ 3,109.52 ಕೋಟಿ ಎಂದು ಅಂದಾಜು ಮಾಡಲಾಗಿದೆ. ಕೋವಿಡ್ 19 ರಿಂದಾಗಿ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಸಮಸ್ಯೆ ತಗ್ಗಿಸಲಿದೆ.