ಜಿಎಸ್ ಟಿ ಮಂಡಲಿ ಸಭೆಯಲ್ಲಿ ಕೇಂದ್ರ, ರಾಜ್ಯಗಳ ಸಂಘರ್ಷ?

ನವದೆಹಲಿ, ಡಿ 16 ರಾಜ್ಯಗಳಿಗೆ ನೀಡಬೇಕಿರುವ ಬಾಕಿ ಪರಿಹಾರ ಮೊತ್ತ  ಪಾವತಿ ವಿಷಯವು ಇದೆ  18 ರಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಲಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ  ಕಾವೇರಿದ ವಾತಾವರಣ, ಮಾತಿನ ಚಕಿಮಕಿ  ನಡೆಯಲಿದೆ ಎನ್ನಲಾಗಿದೆ. ಆದರೆ ಈ ವಿಷಯ ಕೌನ್ಸಿಲ್ ಸಭೆಯ  ಪ್ರಮುಖ  ಕಾರ್ಯಸೂಚಿಯ ಭಾಗವಾಗದಿದ್ದರೂ ಸಹ ಕಾವೇರಿದ ಮಾತಿನ ಚಕಮಕಿಗೆ ಕಾರಣವಾಗುವ ಸಾಧ್ಯತೆ ಬಹಳವಾಗಿದೆ ಎನ್ನಲಾಗಿದೆ.  ಬಿಜೆಪಿಯೇತರ  ಆಡಳಿತ ರಾಜ್ಯಗಳ ಹಣಕಾಸು ಸಚಿವರು ಸಭೆಯ  ಕಾರ್ಯತಂತ್ರ ಕುರಿತು  ಸೋಮವಾರ ಚರ್ಚಿಸುವ ಸಾಧ್ಯತೆಯಿದೆ ಎಂದೂ  ಮೂಲಗಳು ತಿಳಿಸಿವೆ.ಪರಿಹಾರದ ವಿಷಯವನ್ನು ಬುಧವಾರ ತೆಗೆದುಕೊಳ್ಳಲು ಕೌನ್ಸಿಲ್ ವಿಫಲವಾದರೆ ಕೆಲವರು ಮಂಡಳಿ ಸಭೆ ಬಹಿಷ್ಕರಿಸಿ ಸಭೆಯಿಂದ ಹೊರಹೋಗುವ ಸಾದ್ಯತೆಯೂ ಇದೆ, ರಾಜ್ಯಗಳಿಗೆ ಕೇಂದ್ರ  ಬಾಕಿ ಉಳಿಸಿಕೊಂಡಿರುವುದೇ   ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಹೆಚ್ಚಿನ  ರಾಜ್ಯಗಳು  ಸಭೆಯಿಂದ ಹೊರ ನಡೆದರೆ ಸಭೆಯ ಉದ್ದೇಶವೇ  ಸಫಲವಾಗದು  ಎಂದು ಹೇಳಲಾಗಿದ್ದು  ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಗೂ  ಇದು ಕಾರಣವಾಗಲಿದೆ ಎನ್ನಲಾಗಿದೆ ಸಭೆಯಲ್ಲಿ , ಜಿಎಸ್ಟಿ ಬಗ್ಗೆ ಯಾವುದೇ ನಿರ್ಧಾರ ಪ್ರಕಟವಾಗದೆ ಇರಲೂಬಹುದು.