ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಶೇಡಬಾಳ: ಆಡಳಿತ ಮಂಡಳಿಯವರ ದೂರದೃಷ್ಟಿ, ಸಿಬ್ಬಂದಿವರ್ಗದವರ ಬದ್ಧತೆ, ಸಾಲಗಾರರ ಪ್ರಾಮಾಣಿಕತೆ ಮೇಲೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಕನರ್ಾಟಕ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮತ್ತು ಕೃಷಿ ಸಚಿವರಾದ ಲಕ್ಷಣ ಸವದಿ ಹೇಳಿದರು.

ಅವರು ಶನಿವಾರ ದಿ. 7/12/2019 ರಂದು ಕಾಗವಾಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಶತಮಾನೋತ್ಸವ ಭವನದ ಅಡಿಗಲ್ಲು ಸಮಾರಂಭ ನೆರವೇರಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. 

ಅವರು ಮುಂದೆ ಮಾತನಾಡುತ್ತಾ ದೇಶದಲ್ಲಿ ಸಹಕಾರಿ ರಂಗದಲ್ಲಿ ಗುಜರಾತ ರಾಜ್ಯ ಪ್ರಥಮ, ಮಹಾರಾಷ್ಟ್ರ ರಾಜ್ಯ ದ್ವೀತಿಯ, ಕನರ್ಾಟಕ ರಾಜ್ಯ ತೃತೀಯ ಸ್ಥಾನ ಪಡೆದುಕೊಂಡು ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ನಾನು ಸಹಕಾರಿ ರಂಗದ ಚಳುವಳಿಯಿಂದಲೇ ರಾಜಕೀಯವಾಗಿ ಬೆಳೆದು ಇಂದು ಕನರ್ಾಟಕದ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಈ ರಾಜಕೀಯ ಪ್ರವೇಶದ ಮೊದಲ ಮೆಟ್ಟಿಲು ಸಹಕಾರಿ ಕ್ಷೇತ್ರವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ವಿವರಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ 116 ವರ್ಷಗಳ ಹಿಂದೆ ಸಹಕಾರಿ ಕ್ಷೇತ್ರ ಸ್ಥಾಪನೆಗೊಂಡಿದೆ. ಆಗೀನ ಹಿರಿಯರು ತಮ್ಮ ಸ್ವಾರ್ಥವನ್ನು ಬದಿಗೆ ಇರಿಸಿ ಸಂಘವನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಿ ಉಳಿಸಿ ಬೆಳೆಸಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು  ಸ್ಮರಿಸುತ್ತಾ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಂಘವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವಂತೆ ಕಿವಿ ಮಾತು ಹೇಳಿದರು. 

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ರಾಜು ಕಾಗೆ, ಯುವ ಮುಖಂಡ ಶ್ರೀನಿವಾಸ ಪಾಟೀಲ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬೆಳಗಾವಿಯ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ರಾಜಕೀಯ ಅಂದರೆ ಬಚ್ಚಲು ಮನೆ ಇದ್ದ ಹಾಗೆ. ಸ್ನಾನ ಮಾಡುವಾಗ ಮಾತ್ರ ಉಪಯೋಗಿಸಬೇಕು ವಿನಹ ದಿನವಿಡಿ ಅಲ್ಲೆ ಕುಳಿತರೆ ಸಾಲದು. ಹಾಗೇ ರಾಜಕಾರಣಿ ಕೂಡ ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ ಚುನಾವಣೆ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬ ರಾಜಕಾರಣಿಯ ಕರ್ತವ್ಯವಾಗಿದೆ ಎಂದು ಕಿವಿ ಮಾತು ಹೇಳಿದರು.

ರಾಜಕೀಯ ಮಾಡುವಾಗ ರಾಜಕೀಯ ಮಾಡೋಣ. ಅಭಿವೃದ್ಧಿ ವಿಷಯ ಬಂದಾಗ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು. 

ಕಾಗವಾಡ ಗುರುದೇವಾಶ್ರಮದ ಪೀಠಾಧಿಪತಿಗಳಾದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮಿಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶರ್ಿವಚನ ನೀಡಿದರು.

ಶತಮಾನೋತ್ಸವ ಸಮಾರಂಭದ ಅಂಗವಾಗಿ ಶತಮಾನೋತ್ಸವ ಭವನದ ಅಡಿಗಲ್ಲು ಸಮಾರಂಭ, ಸ್ಮರಣ ಸಂಚಿಕೆ ಬಿಡುಗಡೆ, ಹಿರಿಯ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಣೆ ಮೊದಲಾದ ಕಾರ್ಯಕ್ರಮಗಳು ಜರುಗಿದವು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜು ಕಾಗೆ, ಮಾಜಿ ಶಾಸಕ ಶ್ರೀಮಂತ ಪಾಟೀಲರ ಪುತ್ರ ಶ್ರೀನಿವಾಸ ಪಾಟೀಲ, ಬೆಳಗಾವಿ ಮಾಜಿ ಶಾಸಕ ಸಂಜಯ ಪಾಟೀಲ, ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಸಹಕಾರಿ ಧುರೀಣ ಡಿ.ಟಿ. ಪಾಟೀಲ, ಶಿರೋಳ ದತ್ತ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಸಿದ್ಧಗೌಡ ಪಾಟೀಲ, ಕೃಷ್ಣ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಜ್ಯೋತಗೌಡ ಪಾಟೀಲ, ಜಿಪಂ ಸದಸ್ಯ ಅಜೀತ ಚೌಗಲಾ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಕಾಗವಾಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಚೌಗಲಾ, ಸುಭಾಷ ಕಟಾರೆ, ಪ್ರಕಾಶ ಕಟಾರೆ, ಶಾಂತಿನಾಥ ಕಿನಂಗೆ, ಅಭಯ ಅಕಿವಾಟೆ, ಶಿವಾನಂದ ಪಾಟೀಲ, ಅಣ್ಣಾಸಾಬ ಪಾಟೀಲ, ನಂದೇಶ್ವರ, ಜಯಪಾಲ ಯರಂಡೋಲಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಈ ಸಮಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಾಂತಿನಾಥ ಅಣ್ಣಪ್ಪ ಕಿನಂಗೆ, ಉಪಾಧ್ಯಕ್ಷರಾದ ಬಸವರಾಜ ದಾದಾ ಉಪ್ಪಾರ, ಆಡಳಿತ ಮಂಡಳಿ ಸದಸ್ಯರಾದ ಪ್ರಮೋದ ಅಣ್ಣಾಸಾಬ ಕಟಾರೆ, ಜ್ಯೋತಿಕುಮಾರ ಸಿದ್ದಗೌಡ ಪಾಟೀಲ, ಬಸಗೌಡ ಅಪ್ಪಣ್ಣಗೌಡ ಪಾಟೀಲ, ಬಾಬಾಸಾಬ ಬಾಳಾಸಾಬ ಚೌಗಲಾ, ಕುಮಾರ ಪಾರೀಸ ಪೂಜಾರಿ, ಅನಿಲ ರಾವಸಾಬ ಭಜಂತ್ರಿ, ಸೌ. ಕವಿತಾ ಅನಿಲ ಮಗದುಮ, ಸೌ.ವಿಜುಬಾಯಿ ಸುರೇಂದ್ರ ಕವಟಗೆ, ಬಿ.ಆಯ್.ಡಿ.ಸಿ.ಸಿ.ಬ್ಯಾಂಕ ಕಾಗವಾಡದ ಹನಮಂತ ಯಲ್ಲಪ್ಪ ಸಂಕ್ರಟ್ಟಿ, ಮುಖ್ಯಕಾರ್ಯನಿವರ್ಾಹಕರು ರಾಜೇಂದ್ರ ಗುಂಡು ಪೂಜಾರಿ ಸೇರಿದಂತೆ ಅನೇಕರು ಇದ್ದರು. ನಿವೃತ್ತ ಉಪನ್ಯಾಸಕ ಬಿ.ಎ.ಪಾಟೀಲ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.