ಲೋಕದರ್ಶನ ವರದಿ
ರಾಣೇಬೆನ್ನೂರ25: ವಾಹನಗಳ ಸುರಕ್ಷಾ ದೃಷ್ಟಿಯಿಂದ ಅವುಗಳಿಗೆ ತಪ್ಪದೇ ವಿಮೆ ಮಾಡಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬ ವಾಹನ ಮಾಲೀಕರು ಬೆಳೆಸಿಕೊಳ್ಳಬೇಕು ಎಂದು ಸ್ಥಳೀಯ ನ್ಯೂ ಇಂಡಿಯಾ ಅಶೂರೆನ್ಸ್ನ ವ್ಯವಸ್ಥಾಪಕ ಮೃತ್ಯುಂಜಯ ಹೇಳಿದರು.
ನಗರದಲ್ಲಿ ನ್ಯೂ ಇಂಡಿಯಾ ಅಶೂರೆನ್ಸ್ನ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಸ್ಥಳೀಯ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಾಹನಗಳಿಗೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅವುಗಳಿಗೆ ವಿಮೆ ಮಾಡಿಸಿದ್ದರೆ ವಾಹನಗಳ ಮಾಲೀಕರು ಪರದಾಡುವ ಪರಿಸ್ಥಿತಿ ಉಂಟಾಗುವುದಿಲ್ಲ. ವಿಮಾ ಕಂಪನಿಯ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಿ ಪರಿಹಾರ ನೀಡುತ್ತದೆ ಎಂದರು.
ಸ್ಥಳೀಯ ನ್ಯಾಯಾಲಯಗಳ ನ್ಯಾಯಾಧೀಶರುಗಳಾದ ಬಿ.ಜಿ.ಪ್ರಮೋದ, ಮಹೇಶ, ಶರವಣನ್ ಸಮಾರಂಭ ಉದ್ಘಾಟಿಸಿದರು. ಸಮಾರಂಭದ ಅಂಗವಾಗಿ ನೂರಕ್ಕೂ ಅಧಿಕ ಗ್ರಾಹಕರಿಗೆ ವಿಮಾ ಸಂಸ್ಥೆಯ ವತಿಯಿಂದ ತಲಾ ಒಂದೊಂದು ಸಸಿ ಹಾಗೂ ಸಿಹಿಯನ್ನು ವಿತರಿಸಲಾಯಿತು.
ಸದಾನಂದ ಕರೇಗೌಡರ, ಎಸ್.ಸಿ.ಹುಲ್ಮನಿ, ರವೀಂದ್ರ ಗುಂಡಗಟ್ಟಿ, ಲತಾ ದೊಡ್ಮನಿ, ರಮೇಶ ಹಂಪಣ್ಣನವರ, ಜಗದೀಶ ಅಂಕಲಕೋಟಿ, ರವಿ ಹೊಸಪೇಟೆ, ಗುರುರಾಜ ವರಾಹಮೂತರ್ಿ ಹಾಗೂ ವಿಮಾ ಕಂಪನಿಯ ಸಿಬ್ಬಂದಿ ವರ್ಗ ಇದ್ದರು.