ಬಾಗಲಕೋಟೆ೧೧: ದೇಶದ ಭದ್ರ ಬುನಾದಿಗೆ ಹಾಗೂ ದೇಶದ ವಿವಿಧ ಯೋಜನೆಗಳ ರೂಪು ರೇಷೆಗೆ ಜನಗಣತಿ ಕಾರ್ಯ ಮಹತ್ವದ್ದಾಗಿದ್ದು, ಎಲ್ಲರೂ ಜವಾಬ್ದಾರಿತನದಿಂದ ಕಾರ್ಯನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿಂದು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಹಮ್ಮಿಕೊಂಡ ಭಾರತ ಜನಗಣತಿ 2020-21 ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ನೀಲನಕ್ಷೆಯನ್ನು ತಯಾರಿಸಲು ಹಾಗೂ ದೇಶದ ಜನಸಾಂದ್ರತೆಯನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಈ ಜನಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜನಗಣತಿಯ ಮಾಹಿತಿ ಆಧಾರದ ಮೇಲೆ ವಿವಿಧ ಯೋಜನೆಗಳ ಅನುಷ್ಠಾನವಾಗುತ್ತದೆ. ಆದ್ದರಿಂದ ಜನಗಣತಿ ನಡೆಸುವವರು ಮುತುವಜರ್ಿ ವಹಿಸಿ ಕೆಲಸ ಮಾಡಬೇಕು. ಈ ಮಹತ್ವದ ಕಾರ್ಯದಲ್ಲಿ ತೊಡಗಿರುವ ಕ್ಷೇತ್ರ ತರಬೇತಿದಾರರು 4 ದಿನಗಳ ಕಾಲ ಜರಗುವ ಈ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಪೂರ್ಣ ತರಬೇತಿ ಪಡೆದುಕೊಳ್ಳಬೇಕು. ಗಣತಿ ಕಾರ್ಯದಲ್ಲಿ ಯಾವುದೇ ರೀತಿ ಲೋಪವಾಗದಂತೆ ಜವಾಬ್ದಾರಿತನದಿಂದ ಕೆಲಸ ನಿರ್ವಹಿಸಬೇಕು ಎಂದರು.
ಜನಗಣತಿಯಂತಹ ಮಹತ್ವದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಒಂದು ಸುಯೋಗ. ಹಿಂದೆ ಮಾನ್ಯುವಲ್ ವ್ಯವಸ್ಥೆ ಇದ್ದು, ಈಗ ಮೊಬೈಲ್ ಆಪ್ ಮೂಲಕ ಈ ಕಾರ್ಯವನ್ನು ಕೈಗೊಳ್ಳುತ್ತಿರುವದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ತರಬೇತಿಯ ಲಾಭ ಪಡೆದು ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಿಳಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರಾದ ಮಲ್ಲಿಕಾಜರ್ುನ ಗುಡೂರ ಮಾತನಾಡಿ ಜನಗಣತಿ ಆಧಾರವಾಗಿಟ್ಟುಕೊಂಡು ವಾರ್ಡ ವಿಂಗಡಣೆ, ವಿಧಾನ ಸಭಾ, ಲೋಕಸಭಾ ಕ್ಷೇತ್ರಗಳ ವಿಂಗಡನೆಯೂ ಸಹ ನಡೆಸಲಾಗುತ್ತಿದ್ದು, ಜನಗಣತಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಅಂಕಿಸಂಖ್ಯಾಧಿಕಾರಿ ಹಾಗೂ ಜಿಲ್ಲಾ ಜನಗಣತಿಯ ಜಿಲ್ಲಾ ಮಾಸ್ಟರ್ ಟ್ರೈನರ್ ಗಂಗಾಧರ ದಿವಟರ್ ಮತ್ತು ಜನಗಣತಿಯ ಜಿಲ್ಲಾ ನೋಡಲ್ ಅಧಿಕಾರಿ ಶಾಮ್ಕುಮಾರ ಗಣತಿದಾರರು ಹಾಗೂ ಮೇಲ್ವಿಚಾರರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಬೋಧಕರಾದ ಎಸ್.ಡಿ.ಸಾಲಿಮಠ, ಅಸ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.