ನವದೆಹಲಿ, ನ.11 : ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಟಿ.ಎನ್. ಶೇಷನ್ ಅವರ ನಿಧನ ಸುದ್ದಿ ತಿಳಿದು ತೀವ್ರ ಬೇಸರ ಉಂಟಾಗಿದೆ. ಅವರೊಬ್ಬ ಗೌರವಾನ್ವಿತ ನಾಗರಿಕ ಸೇವಾ ಅಧಿಕಾರಿಯಾಗಿದ್ದರು. ಮುಖ್ಯ ಚುನಾವಣಾ ಆಯುಕ್ತರಾಗಿ ಶೇಷನ್ ಅವರು ಮಾಡಿರುವ ಸುಧಾರಣೆಗಳು ಒಂದು ಹೊಸ ಯುಗದ ಆರಂಭವಾಗಿತ್ತು ಎಂದು ರಾಷ್ಟ್ರಪತಿ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃದಯತುಂಬಿದ ಸಂತಾಪಗಳು ಎಂದು ಕೋವಿಂದ್ ತಿಳಿಸಿದ್ದಾರೆ.