ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ

ಗದಗ:  ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗದಗ-ಬೆಟಗೇರಿ ನಗರದ ಹಾತಲಗೇರಿ ನಾಕಾದ ಕನಕ ವೃತ್ತದಲ್ಲಿಂದು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸುವದರ ಮೂಲಕ ಆಚರಿಸಲಾಯಿತು. ಗದಗ ಜಿಲ್ಲಾ ಪಂಚಾಯತ ಸಿ.ಇ.ಓ ಡಾ.ಆನಂದ ಕೆ. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಶಗಿ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಗಣ್ಯರಾದ ಫಕೀರಪ್ಪ ಹೆಬಸೂರ, ರವಿ ದಂಡೀನ, ಕೆ.ಬಿ.ತಳಗೇರಿ, ಅನೀಲ ಸಿಂಗಟಾಲಕೇರಿ, ಅನೀಲ ವೈದ್ಯ, ಎನ್.ಎಂ.ಅಂಬಲಿ, ಎಂ.ಎನ್.ಕಾಮನಳ್ಳಿ, ಎಂ.ಸಿ.ವಗ್ಗಿ, ವಿ.ವಾಯ್.ಮಕ್ಕಣ್ಣವರ, ಎಸ್.ಡಿ. ಸಿಂಗಟಾಲಕೇರಿ, ಹುಚ್ಚಪ್ಪ ಶಹಪಾರು, ಬಿ.ವಾಯ್.ಡೊಳ್ಳಿನ, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.