ಶರಣೆ ಗಂಗಾಂಬಿಕಾ ಬಳಗದಿಂದ ಜಗನ್ಮಾತೆ ಅಕ್ಕಮಹಾದೇವಿ ಹಾಗೂ ಬಸವಣ್ಣ ನವರ ಜಯಂತಿ
Celebration of the birth anniversary of Mother Goddess Akkamahadevi and Basavanna from Sharane Ganga
ಹುಬ್ಬಳ್ಳಿ 26 : ಅಕ್ಷಯ್ ಕಾಲೋನಿಯ ಮಹಾಶರಣೆ ಗಂಗಾಂಬಿಕಾ ಬಳಗವು ಜಗನ್ಮಾತೆ ಅಕ್ಕಮಹಾದೇವಿ ಹಾಗೂ ವಿಶ್ವ ಗುರು ಬಸವಣ್ಣ ನವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿತು. ಉದಯೋನ್ಮುಖ ಸಂಗೀತ ಕಲಾವಿದೆ ಹಾಗೂ ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿನಿ ಕು. ಶಿವಾನಿ ಕವಟೆಕರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಿರಣಾ ಘರಾಣಾ ಪರಂಪರೆಯ ಹಿಂದೂಸ್ತಾನಿ ಸಂಗೀತ ಕಲಾವಿದೆ ಶಿವಾನಿ ಅವರು ಪೂರಿಯಾ ಧನಾಶ್ರೀ ರಾಗ ದಿಂದ ಶಾಸ್ತ್ರೀಯ ಸಂಗೀತ ವನ್ನು ಆರಂಭಿಸಿ, ಅನಂತರದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು, ಅಕ್ಕನ ವಚನಗಳನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ ಹಾಡಿ ಶೋತ್ರುಗಳನ್ನು ಮನರಂಜಿಸಿದರು. ಅಧ್ಯಕ್ಷತೆಯನ್ನು ಅನುಭಾವಿ ಲೇಖಕಿ ಶಾಂತಾ ಕೆ. ಬಸವರಾಜ ವಹಿಸಿದ್ದರು. ದಾಕ್ಷಾಯಣಿ ಕೋಳಿವಾಡ ಅವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.
ಬಳಗದ ಸಂಚಾಲಕರಾದ ಡಾ. ಸ್ನೇಹಾ ಭೂಸಾನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರು ಸಂಗೀತಕ್ಕೆ ಕೊಟ್ಟ ಪ್ರಧಾನ್ಯತೆ ಯನ್ನು ವಿವರಿಸಿದರು. ಶಶಿಕಲಾ ಕೊಡೇಕಲ್ ವಂದಿಸಿದರು. ಗೀತಾ ಸಾಲಿಮಠ ನಿರೂಪಿಸಿದರು. ಆಶಾ ಕವಳಿ, ಗೀತಾ ತೆಂಗಿನ ಕಾಯಿ, ಸುಧಾ ಗಂಜಿ, ಶೈಲಾ ಹುಲಮನಿ, ಸುಶೀಲಮ್ಮ ಬಣಕಾರ, ಶೋಭಾ ದೇಸಾಯಿ, ಮಮತಾ ಶೆಟ್ಟರ, ಸರೋಜಾ ಮೇಟಿ, ಸುನೀತಾ ಹುಬ್ಳಿಕರ, ಬಸಮ್ಮ ಕೋಟಿ, ಸೀಮಾ, ಸುಮಾ, ಗೀತಾ, ಶಾಂತಾ, ಗಂಗಾ,ಪಾರ್ವತಿ, ಅನುಪಮಾ, ಶಾರದಾ,ರತ್ನಾ, ರೇಖಾ,ವೀಣಾ,ಲಕ್ಷ್ಮಿ, ಸುಷ್ಮಾ, ಶಿಲ್ಪಾ, ಅಶ್ವಿನಿ,ಡಾ. ಪ್ರಕಾಶ ಮುನ್ನೊಳಿ, ಶ್ರೀಶೈಲ ವಾಲಿ,ವಿರೂಪಾಕ್ಷ ಭೂಸನೂರ, ಅಪ್ಪಾಸಾಬ ಸಿಂದಗಿ, ಶಶಿಧರ ನಾರಾ, ಡಾ. ಕುಬಸದ, ರವೀಂದ್ರ ಕವಟೇಕರ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ಸಹನಾ ಸುರೇಶ್ ಹೊರಕೇರಿ, ಸುಪ್ರಿಯಾ ಸುರೇಶ್ ಹೊರಕೇರಿ, ಮುಂತಾದವರು ಉಪಸ್ಥಿತರಿದ್ದರು. ವಚನ ಮಂಗಲದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 