ಶಿಂದೋಗಿ ಗ್ರಾಮದಲ್ಲಿ ಕನಕದಾಸರ ಜಯಂತ್ಯೋತ್ಸವ ಆಚರಣೆ

ಲೋಕದರ್ಶನ ವರದಿ

ಮುನವಳ್ಳಿ:  ನ. 15 ರಂದು ಸಾಯಂಕಾಲ ಸಮೀಪದ ಶಿಂದೋಗಿ ಗ್ರಾಮದಲ್ಲಿ ಹರಿದಾಸ ಶ್ರೇಷ್ಠ ಶ್ರೀ ಕನಕದಾಸರ 532 ನೇ ಜಯಂತ್ಯೋತ್ಸವ ಜರುಗಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯ ಫಕೀರಪ್ಪ ಹದ್ದನ್ನವರ ಕನಕದಾಸರ ತತ್ವ ಅದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬದಾಮಿ ತಹಶೀಲ್ದಾರ ಮಲ್ಲಿಕಾಜರ್ುನ ಹೆಗ್ಗನ್ನವರ ಇತ್ತೀಚಿಗೆ ಸಂಭವಿಸಿದ ನೆರೆಯಿಂದ ಜನತೆ ಅಪಾರ ಹಾನಿಯನ್ನು ಅನುಭವಿಸಿದ್ದಾರೆ ಅವರಿಗೆ ಭಗವಂತ ಚೇತರಿಕೆಯ ಶಕ್ತಿಯನ್ನು ನೀಡಲಿ. 

ಶ್ರೀ ಕನಕದಾಸರು ಮಹಾನ್ ಮಾನವತಾವಾದಿಯಾಗಿದ್ದರೂ ಅಂತ ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುತ್ತ ಉತ್ತಮ ಸಮಾಜವನ್ನು ನಿಮರ್ಿಸಬೇಕಿದೆ ಎಂದರು. ಇನ್ನೋರ್ವ ಅತಿಥಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಯಲ್ಲರಾಜ ಸಿಂಗನ್ನವರ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳು ಸಾಕಷ್ಟು ಇದ್ದು ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಮುನವಳ್ಳಿಯ ಸೋಮಶೇಖರಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಶಿಂದೋಗಿ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಶ್ರೀಗಳು. ಸವದತ್ತಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ವೇ.ಮೂ. ಮಡಿವಾಳಸ್ವಾಮಿ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಹಿರಿಯರಾದ ದುರ್ಗಪ್ಪ ಬೈರಪ್ಪನವರ ವಹಿಸಿದ್ದರು

ಸಾಹಿತಿ ವಾಯ್. ಎಂ. ಯಾಕ್ಕೊಳ್ಳಿ ಮಾತನಾಡಿ ಶ್ರೀ ಕನಕದಾಸರು ತಮ್ಮ ದಾಸರಪದಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಸ್ವಾಗತವನ್ನು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಡಿ.ಡಿ.ಟೋಪೋಜಿ ನಿರೂಪಣೆಯನ್ನು ವಾಯ್.ಎಫ್.ಮುಶೆನ್ನವರ ವಂದನಾರ್ಪಣೆಯನ್ನು ರಾಜು ತೊರಗಲ್ಲ ಮಾಡಿದರು. ಕಾರ್ಯಕ್ರಮ ಮುಗಿದ ಮೇಲೆ ಗಾನಸುಧೆ ಸಂಗೀತ ಕಾರ್ಯಕ್ರಮ ಜರುಗಿತು.