ಸಾಮಾಜಿಕ ನ್ಯಾಯದ ಸಂತ ಹಡಪದ ಅಪ್ಪಣ್ಣವರ 892ನೇ ಜಯಂತಿ ಆಚರಣೆ

ಸಾಮಾಜಿಕ ನ್ಯಾಯದ ಸಂತ ಹಡಪದ ಅಪ್ಪಣ್ಣವರ 892ನೇ ಜಯಂತಿ ಆಚರಣೆ Celebration of the 892nd Birth Anniversary of Hadapada Appanna, the Saint of Social Justice

ಯಮಕನಮರಡಿ 30 : ಸಮೀಪದ   ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ವತಿಯಿಂದ ಯಮಕನಮರಡಿ ಗ್ರಾಮದ ಹುಣಸಿಕೋಳ ಮಠದ ಸಭಾಭವನದಲ್ಲಿ   ಹಡಪದ ಅಪ್ಪಣ್ಣವರ 892 ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಹುಣಸಿಕೋಳಮಠದ ಉತ್ತರಾಧಿಕಾರಿ   ಸಿದ್ದ ಬಸವ ದೇವರು ವಹಿಸಿದರು.  ಹಡಪದ ಅಪ್ಪಣ್ಣ ಅವರು ಪೋಟೋಗೆ ಮಾಲಾರೆ​‍್ಣ ಮತ್ತು ಪೂಜೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.   

ಹಡಪದ ಅಪ್ಪಣ್ಣ ಅವರ ಜಯಂತಿ ಕುರಿತು ಸಾನಿಧ್ಯ ವಹಿಸಿದ್ದ   ಸಿದ್ದ ಬಸವ ದೇವರು ಮಾತನಾಡಿ ಅವರು ತಮ್ಮ ಕಾಯಕವನ್ನೇ ಶಿವಸೇವೆಯಾಗಿ ಸ್ವೀಕರಿಸಿ ಬಸವಣ್ಣವರ "ಕಾಯಕವೇ ಕೈಲಾಸ" ಎಂಬ ತತ್ವವನ್ನು ತಮ್ಮ ಬದುಕಿನಲ್ಲಿ ಅಕ್ಷರಶ: ಅಳವಡಿಸಿಕೊಂಡರು. ಶ್ರಮಕ್ಕೆ ಗೌರವ ನೀಡಿದ ಅವರು ಪ್ರತಿಯೊಂದು ಕಾಯಕವೂ ಪವಿತ್ರ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. 

ಹಡಪದ ಅಪ್ಪಣ್ಣರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾನತೆ, ದಾಸೋಹ ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತರಿಸಿದರು ಜಾತಿ, ಮತ ಮತ್ತು ವರ್ಣಭೇದಗಳನ್ನು ತಿರಸ್ಕರಿಸಿ, ಪ್ರತಿಯೊಬ್ಬ ಮಾನವನಲ್ಲಿಯೂ ಶಿವನನ್ನು ಕಾಣುವ ಬಸವ ತತ್ವವನ್ನು ತಮ್ಮ ಜೀವನದಲ್ಲಿ ಆಚರಿಸಿದರು. ಕಲ್ಯಾಣದ ಶರಣ ಚಳುವಳಿಯಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಅವರು ತೋರಿದ ನಿಷ್ಠೆ, ಧೈರ್ಯ ಮತ್ತು ಸೇವಾ ಭಾವ ಇಂದಿಗೂ ಮಾದರಿಯಾಗಿದೆ ಅವರು ಜೀವನವು ಕೇವಲ ಒಬ್ಬ ಶರಣನ ಜೀವನವಲ್ಲ ಸಮಾಜಕ್ಕೆ ದಾರಿ ದೀಪವಾದ ಆದರ್ಶ ಜೀವನವಾಗಿದೆ ಎಂದು ಹೇಳಿದರು.

ಹಡಪದ ಅಪ್ಪಣ್ಣವರು ಸುಮಾರು 242 ವಚನಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಕಾಯಕ, ಆತ್ಮ ಶುದ್ಧಿ, ಶಿವಭಕ್ತಿ ,ಸತ್ಯನಿಷ್ಠೆ, ಪ್ರಮಾಣಿಕತೆ ಮತ್ತು ಮಾನ್ವಿಯ ಮೌಲ್ಯಗಳನ್ನು ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ ಅವರ ವಚನಗಳಲ್ಲಿ ಆತ್ಮ ಸಾಕ್ಷಾತ್ಕಾರ ಮತ್ತು ಲಿಂಗೈಕ್ಯದ ಅನುಭವ ಅತ್ಯುನ್ನತ ಸ್ಥಾನ ಪಡೆದಿದೆ ಅಂತಹ ಮಹಾನ ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಹಡಪದ ಅಪ್ಪಣ್ಣ ಅವರು ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು ಎಂದು ಹೇಳಿದರು. ಈ ಸಂಘದ ಅಧ್ಯಕ್ಷರಾದ ಕೆಂಪಣ್ಣ ನಾವಿ ಮತ್ತು ಉಪಾಧ್ಯಕ್ಷರಾದ ಈಶ್ವರ್ ನಿರ್ಲಿ ಕಾರ್ಯದರ್ಶಿ, ಬಸವರಾಜ ನಾವಿ ಸದಸ್ಯರಾದ ಮಲ್ಲಪ್ಪ, ಬಸವರಾಜ, ರೇವಪ್ಪ, ಶಿವಾನಂದ, ಸಿದ್ದಪ್ಪ, ಭೀಮಸೇನ, ಲಕ್ಷ್ಮಣ, ರವಿ ಮುಂತಾದವರು ಈ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು