150ನೇ ಗಾಂಧಿ ಜಯಂತಿ ವಿಜೃಭಂನೆಯಿಂದ ಆಚರಣೆ

ಸಂಬರಗಿ 02: ಸಂಬರಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ 150 ನೇ ಗಾಂಧಿಜೀ  ಹಾಗೂ ಲಾಲಬಹದ್ದೂರ ಶಾಸ್ತ್ರಿ ಜಿ 115 ನೇ ಜಯಂತಿ ಅತಿ  ವಿಜೃಭಂನೆಯಿಂದ ಆಚರಿಸಲಾಯಿತು.  ಸಂಬರಗಿ ಗ್ರಾಮಪಂಚಾಯತ ಕಾರ್ಯಾಲಯದಲ್ಲಿ ಮಾದೇವ ತಾನಗೆ, ಇವರ ಹಸ್ತದಿಂದ ಮಹತ್ಮಾ ಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ನೆರವೆರಿಸಿದರು. ಈ ವೇಳೆ ಗ್ರಾಮಪಂಚಾಯತ ಅಧ್ಯಕ್ಷ ಮಹೇವ ತಾನಗೆ, ಮಾತನಾಡಿ ಎಲ್ಲರೂ ಪ್ಯಾಸ್ಟೀಕ್ ಬಳಕೆ ಮಾಡಬಾರದೆಂದು ಹೇಳಿ ಪರಿಸರ ಹಾನಿಯಾಗುತ್ತಿದು. 3 ರಿಂದ 15 ಅಕ್ಟೋಬರ್ ವರೆಗೆ ಜನಜಾಗ್ರತಿ ಮಾಡಲಾಗುವುದೆಂದು ಹೇಳಿದರು. ಈ ವೇಳೆ ಸರಜೀರಾವ ಸೋರಡೆ, ತುಕಾರಮ ಶಿಂಧೆ, ಅಮಿತ ಶಿಂಧೆ, ರಮೇಶ ಪವಾರ, ಆನಂದಾ ಕೋಳಿ ಸೇರಿದಂತೆ ಅನೇಕ ಗಣ್ಯರು ಗಾಜರಿದರು. 

ಖಿಳೇಗಾಂವ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮದ ಗಣ್ಯರಾದ ರಮೇಶ ಪಾಟೀಲ ಇವರ ಹಸ್ತದಿಂದ ಮಹತ್ಮಾಗಾಂದಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಪೋಟೊ ಪೂಜೆ ನೇರವಿರಿಸಿ ಮಾತನಾಡಿದರು. ಈ ವೇಳೆ ಗ್ರಾಮದ ಗಣ್ಯರಾದ ವಿಜಯ ಅಳ್ಳಹಟ್ಟಿ, ಗಣಪತಿ ಮಾಂಕಾಳೆ ಪ್ರಕಾಶ ಪಾಟೀಲ, ಮಾರುತಿ ಗುರವ, ಪಿಡಿಒ ಸಿ. ಜಿ. ಉಮರೆ, ಬಸು ಉಮರೆ, ಪ್ರಶಾಂತ ಧನಾಳ,  ಸೇರಿದಂತ ಅನೇಕ ಗಣ್ಯರು ಹಾಜರಿದ್ದರು. ಜಂಬಗಿ ಗ್ರಾಮಪಂಚಾಯತ ಕಾರ್ಯಾಲಯದಲ್ಲಿ ಗ್ರಾಮದ ಅಧ್ಯಕ್ಷ ಮಾದೇವ ಮಂಟಲಿ ಇವರ ಹಸ್ತದಿಂದ ಮಹತ್ಮಾಗಾಂದಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಪೋಟೊ ಪೂಜೆ ನೇರವಿರಿಸಿ ಮಾತನಾಡಿದರು. ಪ್ಯಾಸ್ಟೀಕ್ ನಿಷೇದ ಕುರಿತು ಮಾಹಿತಿ ನೀಡಿದರು. ಈ ವೇಳೆ ಶಶಿಧರ ಕುಂಬಾರ, ತುಕಾರಾಮ ಮಾಳಿ, ಯಶವಂತ ಪಾಟೀಲ ಗೋಪಾಲ ಕೋಳೆಕರ, ಪ್ರಶಾಂತ ವಾಘ್ಮರೆ, ಪರಶುರಾಮ ವಾಘ್ಮರೆ, ಸೋಮು ರಾಟೋಡ, ಸೋಮು ಕುಂಬಾರ ಪರಶುರಾಮ ಕುಂಬಾರ ಸೇರಿದ ಅನೇಕ ಗಣ್ಯರು ಹಾಜರಿದ್ದರು. ಅರಳಿಹಟ್ಟಿ ಗ್ರಾಮದ ಗ್ರಾಮಪಂಚಾಯತ ಕಾರ್ಯಾಲಯದಲ್ಲಿ ಅಧ್ಯಕ್ಷ ಮಾಸಾಬೀ ಸೈಯದ ಹಿರವಡೆ  ಇವರ ಹಸ್ತದಿಂದ ಮಹತ್ಮಾಗಾಂದಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಪೋಟೊ ಪೂಜೆ ನೇರವಿರಿಸಿ ಮಾತನಾಡಿದರು. ಪ್ಯಾಸ್ಟೀಕ್ ನಿಷೇದ ಕುರಿತು ಮಾಹಿತಿ ನೀಡಿದರು. ರಾಮದಾಸ ಅವಳೆಕರ, ತಾನಾಜಿ ಶಿಂಧೆ, ದೋಂಡಿರಾಮ ಅವಳೆಕರ, ಜಾಂಗಿರ ಬೂವಾ, ಜಿ.ಎಸ್ ಮಠದ ಸೇರಿದ ಅನೇಕ ಗಣ್ಯರು ಹಾಜರಿದ್ದರು. ಕಾರ್ಯದರ್ಶಿ ಅಮಜೆದ ಜಮಾದಾರ ಸ್ವಾಗತಿಸಿ ವಂದಿಸಿದರು ಈ ವೇಳೆ ಪ್ಲಾಸ್ಟೀಕ್ ನಿಷೇಧ ಕುರಿತು ಪ್ರತಿಜ್ಞಾ ಮಾಡಲಾಯಿತ್ತು. ಶಿರೂರ ಗ್ರಾಮದ ಗ್ರಾಮಪಂಚಾಯತ ಕಾರ್ಯಾಲಯದಲ್ಲಿ ಅಧ್ಯಕ್ಷ  ಗೋಕುಳಾ ಶ್ರೀಮಂತ ಕಾರ್ಕಿ    ಇವರ ಹಸ್ತದಿಂದ ಮಹತ್ಮಾಗಾಂದಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಪೋಟೊ ಪೂಜೆ ನೇರವಿರಿಸಿ ಮಾತನಾಡಿದರು. ಈ ವೇಳೆ ಶ್ರೀಮಂತ ಕಾರ್ಕಿ  ರಘು ಹಜಾರೆ, ಮಚಂದ್ರ ಕಾಂಡೆಕರ್, ತುಕಾರಾಮ ಗಾಯಕವಾಡ, ಸಂಜಯ ಐನಾಪೂರೆ, ವಿನಾಯಕ ಗಡದೆ, ಸೇರಿದ ಅನೇಕ ಗಣ್ಯರು ಹಾಜರಿದ್ದರು. ಪಿಡಿಒ ಪ್ರೇಮಾ ಮಾಳಿ ಸ್ವಾಗತಿಸಿ ವಂದಿಸಿದರು.