ಲೋಕದರ್ಶನ ವರದಿ
ಶಿಗ್ಗಾವಿ27 :ಬಂಕಾಪುರ ಪ್ರೇಮಿಗಳ ದಿನಾಚರಣೆಯನ್ನು ಅತಿ ಉತ್ಸುಕತೆಯಿಂದ ಆಚರಿಸುವು ನಾವುಗಳು ಸ್ವಾತಂತ್ರ್ಯ ದಿನಾಚರಣೆ, ಕಾಗರ್ಿಲ್ ವಿಜಯದ ದಿನಾಚರಣೆಯನ್ನು ಆಚರಿಸಲು ನಿರುತ್ಸಾಹ ತೊರಿಸುತ್ತಿದ್ದೇವೆ. ಆದರೆ ಕ.ಸಾ.ಪ. ಆಶ್ರಯದಲ್ಲಿ ಕಾಗರ್ಿಲ್ ವಿಜಯದ ದಿನದ ಅಂಗವಾಗಿ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಪಿ.ಎಸ್.ಐ ಸಂತೋಷ ಪಾಟೀಲ ಹೇಳಿದರು.
ಸರಕಾರಿ ಪ್ರಥಮ ದಜರ್ೆ ಕಾಲೇಜ, ರಾಷ್ಟ್ರೀಯ ಸೇವಾ ಯೋಜನೆ, ಕನ್ನಡ ಸಾಹಿತ್ಯ ಪರಿಷತ್, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ 19ನೇ ವರ್ಷದ ಕಾಗರ್ಿಲ್ ವಿಜಯ ದಿನದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಅವರು ಇತಿಹಾಸದ ಪುಟಗಳನ್ನು ಓದಿ ನಾವು ಯುಧ್ದದ ಕಲ್ಪನೆಯನ್ನು ಮಾಡಿಕೊಂಡರೆ 19 ವರ್ಷಗಳ ಹಿಂದೆ ನಡೆದ ಕಾಗರ್ಿಲ್ ಯುಧ್ಧವನ್ನು ನಾವು ದೃಶ್ಯ ಮಾಧ್ಯಮದ ಮೂಲಕ ನೇರ ಪ್ರಸಾರದಲ್ಲಿ ಕಣ್ಣಾರೆ ಕಂಡಿದ್ದೆವೆ. ಸತತ 74 ದಿನಗಳವರೆಗೆ ನಡೆದ ಕಾಗರ್ಿಲ್ ಯುಧ್ಧದಲ್ಲಿ ಸುಮಾರು 537 ಜನ ನಮ್ಮ ವೀರ ಯೋಧರು ಹೋರಾಡಿ ಮಡಿದರೆ 700 ಕ್ಕಿಂತಲೂ ಅಧಿಕ ಯೋಧರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ವಿಜಯದ ಮಾಲೆಯನ್ನು ನಮ್ಮ ಭಾರತಾಂಬೆ ಕೊರಳಿಗೆ ಧರಿಸಿರುವುದು ಇತಿಹಾಸದ ಪುಟಗಳಲ್ಲಿ ರಾಜಾಜಿಸುತ್ತಿದೆ. ಅದರಲ್ಲಿ 14 ಯೋಧರು ನಮ್ಮ ರಾಜ್ಯ ದವರೆಂಬುವುದು ಕೆಚ್ಚೆದೆಯ ಕನ್ನಡಿಗರಿಗೆ ಕಳಸ ಪ್ರಾಯವಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿರುವ ಎಲ್ಲಾ ಇಲಾಖೆ ಸಂಘ ಸಂಸ್ಥೆಗಳು, ವಿದ್ಯಾಥರ್ಿ ವಕ್ಕುಟ, ರೈತ ಸಂಘಟನೆಗಳು ನಮ್ಮ ವಯಕ್ತಿಕ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಹೋರಾಟ ನಡೆಸಿದ್ದೆವೆ ಆದರೆ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗಮಾಡಿದ ವೀರ ಯೋಧರ ಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯ ಕೊಡೆಸಲು ಹೋರಾಟಮಾಡಿದ ಯಾವುದೆ ಉದಾಹರಣೆಗಳಿಲ್ಲ ಎಂದು ವಿಷಾದ ವ್ಯಕ್ತ ಪಡೆಸಿದರು.
ಕ.ಸಾ.ಪ ತಾಲೂಕಾ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಬರಿ ಸಾಹಿತ್ಯಿಕ ಚಟುವಟಿಕೆಗಳನ್ನು ಮಾತ್ರ ನಡೆಸದೆ ವನಮಹೋತ್ಸವ ಕಾರ್ಯಕ್ರಮಗಳಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ವರ್ಷವಿಡಿ ಮಾಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷರಾದ ಡಾ|| ಆರ್.ಎಸ್.ಅರಳಲೆಮಠ ಮಾತನಾಡಿ ಜಲ, ಪರಿಸರ, ವಾಯು, ನಿಸರ್ಗ ಸಂಪತ್ತು ಮಾನವರಿಂದ ಯಾವುದೆ ಪ್ರತಿಫಲ ಬಯಸದೆ ಮಾನವನ ಬದುಕಿಗೆ ಆಸರೆಯಾಗಿ ನಿಂತಿವೆ. ನಾವು ಸಸಿಗಳಿಗೆ ನೀರುಣಿಸಿ ಬೆಳೆಸಿದರೆ ಪ್ರತಿಫಲವಾಗಿ ಮರ ಗಿಡಗಳು ಮೋಡಗಳನ್ನು ತಡೆದು ಧರೆಗೆ ಮಳೆ ಸುರಿಸಿ ಪರಿಶುದ್ಧವಾದ ಆಮ್ಲಜನಕವನ್ನು ನೀಡುವ ಮೂಲಕ ಮಾನವ ಸಂಕುಲವನ್ನು ಬೆಳೆಸುತ್ತಲಿದೆ ಎಂದು ಹೇಳಿದರು.
ದುಂಡಸಿ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಪೂಜಾರ ಮಾತನಾಡಿ 60 ಕೋಟಿ ಜನ ಸಂಖ್ಯೆ ಇರುವಾಗಿನ ಅರಣ್ಯ ಪ್ರದೇಶ ಈಗಲ ಇದೆ. ಆದರೆ ಜನ ಸಂಖ್ಯೆ ಮಾತ್ರ 130 ಕೋಟಿಗೇರಿದೆ. ಜನ ಸಂಖ್ಯೆಗೆ ಅನುಗುಣವಾಗಿ ಶೇ 33% ರಷ್ಟು ಪರಿಸರದ ಅವಷ್ಯಕತೆ ಇದೆ. ಆದರೆ ಇಗಿರುವ ಪರಿಸರ ಶೇ 17% ರಷ್ಟಿದೆ ಹೀಗಾಗಿ ಮಳೆ ಕೊರತೆಯನ್ನು ಅನುಭವಿಸುವಂತಾಗಿದೆ ಹೀಗೆ ಮುಂದು ವರೆದರೆ ಮಾನವ ಉಸಿರಾಡುವ ಆಮ್ಲಜನಕಕ್ಕು ಪರದಾಡುವಂತ ಪರಿಸ್ಥಿತಿ ಎದುರಾಗಲಿದೆ ಹಾಗಾಗಿ ಸರಕಾರ ಜೂನ 5 ವಿಶ್ವ ಪರಿಸರ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.