ಲೋಕದರ್ಶನ ವರದಿ
ಬೆಟಗೇರಿ 16: ಪ್ರಸಕ್ತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಪ್ರದಾಯದಂತೆ ಹಿರಿಯರು, ರೈತರು ಸಹೋಗದಲ್ಲಿ ಶನಿವಾರ ಜೂ.15 ರಂದು ಕೂರಿಗೆ ಪೂಜೆ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಬೆಳಗ್ಗೆ 10 ಗಂಟೆಗೆ ಪುರದೇವರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರ, ನೈವೆದ್ಯ ಸಮಪರ್ಿಸಿ ಇಲ್ಲಿಯ ಹಿರಿಯರು, ರೈತರು ಈ ವರ್ಷ ಮುಂಗಾರು, ಹಿಂಗಾರೂ ಉತ್ತಮ ಮಳೆಯಾಗಲಿ ಬೆಳೆ ಹುಲಸಾಗಿ ಬೆಳೆಯಲಿ ಎಂದು ಮೇಘರಾಜನಿಗೆ ಹಾಗೂ ದೇವರಲ್ಲಿ ಮೊರೆ ಹೋಗಿ ಬೇಡಿಕೊಂಡರು.
ಗ್ರಾಮದ ಎಲ್ಲ ರೈತರ, ಹಿರಿಯರ ಒಟ್ಟಿಗೆ ಸೇರಿ ಊರಿನ ಧರೆಪ್ಪ ದೊಡ್ಡೊದ್ದಪ್ಪ ಚಂದರಗಿ ಅವರ ಗದ್ದೆಯೊಂದರಲ್ಲಿ ಕೂರಿಗೆ ಪೂಜೆ ಕಾರ್ಯಕ್ರಮ ನೆರವೇರಿಸಿದ ಬಳಿಕ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಯಿತು.
ರಾಮಣ್ಣ ಬಳಿಗಾರ, ಮುತ್ತೆಪ್ಪ ವಡೇರ, ಲಕ್ಷ್ಮಣ ಸೋಮನಗೌಡರ, ಎಮ್.ಐ.ನೀಲಣ್ಣವರ, ಈರಯ್ಯ ಹಿರೇಮಠ, ಲಕ್ಷ್ಮಣ ಚಂದರಗಿ, ವಿಠಲ ಚಂದರಗಿ, ಬಸವಂತ ಚಂದರಗಿ ಸೇರಿದಂತೆ ಯುವಕರು, ರೈತರು, ಮಹಿಳೆಯರು, ವಯೋವೃದ್ಧರು, ಗ್ರಾಮಸ್ಥರು ಇದ್ದರು.