ಕಂಪ್ಲಿ 28: ಸ್ಥಳೀಯ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಅಗ್ನಿ ಬನ್ನಿರಾಯ ಜಯಂತಿ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ನಂತರ ಗ್ರೇಡ್-2 ತಹಶೀಲ್ದಾರ್ ಷಣ್ಮುಕಪ್ಪ ಮಾತನಾಡಿ, ಅಗ್ನಿ ಬನ್ನಿರಾಯ ಅವರು ನೀಡಿದ ಕೊಡುಗೆ ಅನನ್ಯವಾಗಿದ್ದು, ಅವರ ಆದರ್ಶಗಳ ಪರಿಪಾಲನೆಯೊಂದಿಗೆ ನೆಮ್ಮದಿಯ ಜೀವನ ನಡೆಸಬೇಕು. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಇಲ್ಲಿ ಅಗ್ನಿ ಬನ್ನಿರಾಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಿಸಲಾಯಿತು. ಈ ಸಂದರ್ಭದಲ್ಲಿ ಶಿರಸ್ತೇದಾರ ರಮೇಶ, ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ಸರ್ವೆ ಇಲಾಖೆಯ ಪರ್ಯಾಯ ವೇಕ್ಷಕಿ ಕೆ.ಹೆಚ್.ಅಚ್ಚುತ್ತಾ, ಕಂದಾಯ ಇಲಾಖೆ ಸಿಬ್ಬಂದಿಗಳಾದ ವನೀತಾ ಸೇರಿದಂತೆ ಇತರರು ಇದ್ದರು.