ರಾಣೇಬೆನ್ನೂರ 16: ರೈತರ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಬುಧವಾರದಂದು ತಾಲೂಕಿನಾಧ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದು ಸಾಮಾನ್ಯವಾಗಿ ಪವಿತ್ರ ಕ್ಷೇತ್ರಗಳಲ್ಲಿ ಕಂಡು ಬಂದಿತು. ತಾಲೂಕಿನ ಚೌಡಯ್ಯದಾನಪುರ, ಮುದೇನೂರು, ಐರಣಿ, ಕುಮಾರಪಟ್ಟಣ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಹಸ್ರಾರು ಜನರು ಆಗಮಿಸಿ ಸಡಗರದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಬಹುತೇಕ ಪುಣ್ಯ ಕ್ಷೇತ್ರ ನದಿ ತೀರದ ಗ್ರಾಮಗಳಿಗೆ ಎತ್ತು ಚಕ್ಕಡಿ, ಟಾಟಾ ಎಸಿ, ಟ್ರ್ಯಾಕ್ಟರ್, ಕಾರು, ಬೈಕ್ ಸೇರಿದಂತೆ ಮತ್ತಿತರ ವಾಹನಗಳಲ್ಲಿ ಆಗಮಿಸಿ ನದಿಯಲ್ಲಿ ಸ್ನಾನ ಮಾಡಿ, ನಂತರ ದೇವರ ದರ್ಶನ ಪಡೆಯುವುದರ ಮೂಲಕ ಅಲ್ಲಲ್ಲಿ ನದಿ ತೀರದಲ್ಲಿ ಮತ್ತು ಪಾಕರ್್ಗಳಲ್ಲಿ ಹಬ್ಬದೂಟವನ್ನು ಸವಿಯುತ್ತಿದ್ದದ್ದು ಸಾಮಾನ್ಯವಾಗಿ ಕಂಡು ಬಂದಿತು. ಇನ್ನೂ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಕರ ಸಂಕ್ರಾಂತಿಯ ನಿಮಿತ್ಯ ಮುಂಜಾಗೃತವಾಗಿ ಭಾರಿ ಪೊಲೀಸ್ ಬಂದೋಬಸ್ತ್ನ್ನು ನಿಯೋಜಿಸಲಾಗಿತ್ತು. ಮತ್ತು ಸಾರಿಗೆ ಇಲಾಖೆಯಿಂದ ಹೆಚ್ಚುವರಿ ಬಸ್ಗಳನ್ನು ಬಿಡಲಾಗಿತ್ತು.
ಚಿಕ್ಕಮಕ್ಕಳಿಂದ ಹಿಡಿದು ಕುಟುಂಬ ಸಮೇತ ಆಗಮಿಸಿ ಸಂಕ್ರಾಂತಿ ಹಬ್ಬವನ್ನು ಸಂಪ್ರದಾಯಕವಾಗಿ ಕೆಲವರು ಆಚರಿಸಿದರೆ ಇನ್ನೂ ಕೆಲ ಯುವ ಪಡೆ ಎತ್ತು ಚಕ್ಕಡಿ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಸಂಗೀತಕ್ಕೆ ಹೆಜ್ಜೆ ಹಾಕುವಲ್ಲಿ ನಿರತರಾಗಿದ್ದರು. ಕೆಲವರು ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬವನ್ನು ಆಚರಿಸಿದರೆ ಕೆಲ ಯುವಕರು ಗುಂಡು ಮೋಜು ಮಸ್ತಿಯಲ್ಲಿ 44444ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಒಟ್ಟಿನಲ್ಲಿ ಈ ಬಾರಿ ಜ.15 ರಂದು ಸರಕಾರಿ ರಜೆ ಇದ್ದ ಕಾರಣ ಸಂಕ್ರಾಂತಿ ಹಬ್ಬಕ್ಕೆ ಅಧಿಕವಾಗಿ ಜನರು ನದಿ ತೀರದ ಗ್ರಾಮಗಳಿಗೆ ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಹಬ್ಬವನ್ನು ಆಚರಿಸಿ, ಹಬ್ಬದೂಟವನ್ನು ಸವಿದು, ಎಳ್ಳು ಬೆಲ್ಲ ವಿನಿಯೋಗ ಮಾಡುವುದರ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಮೆರಗು ತಂದರು.