ಹೊಸ ಉಡುಪು ಧರಿಸಿ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಆಚರಣೆ

Celebrated Sankranti in a unique way by wearing new clothes

ಮಹಾಲಿಂಗಪುರ 15: ಸಂಕ್ರಾಂತಿ ಹಬ್ಬ ಎಂದರೆ ಸಮೃದ್ಧಿಯ ಸಂಕೇತ, ಸೂರ್ಯ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಹೊರಳುವ ಮೂಲಕ ಹೊಸತನಕ್ಕೆ ತೆರೆದುಕೊಳ್ಳಲು ಇಡೀ ಜೀವಕೋಟಿಗೆ ಪ್ರೇರಣೆ ನೀಡುವ ಹಬ್ಬವಾಗಿದೆ ಮುಖ್ಯ ಶಿಕ್ಷಕಿ ಗೀತಾ ಪಾಟೀಲ ಹೇಳಿದರು. 

ಮಂಗಳವಾರ ನಗರದ ಶ್ರೀ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದ ಹಮ್ಮಿಕೊಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾತನಾಡಿದರು. ಹಸಿರಿಗೆ ಹೊಸ ಉಸಿರು, ನಿಸರ್ಗದಲ್ಲಾಗುವ ಬದಲಾವಣೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಈ ಹಬ್ಬ ಮನುಕುಲಕ್ಕೆ ವಿಶಿಷ್ಟ ಸಂಭ್ರಮವಾಗಿದೆ ಎಂದು ಅವರು ಹೇಳಿದರು. ನಂತರ ಶಿಕ್ಷಕಿ ಶಿವಲೀಲಾ ಹಿರೇಮಠ ಮಾತನಾಡಿ ಸಂಕ್ರಾಂತಿ ಹಬ್ಬದ ಮೂಲಕ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಕೂಡಲು ಒಂದು ವಿಶೇಷ ಅವಕಾಶ ಎಳ್ಳು-ಬೆಲ್ಲದೊಂದಿಗೆ ಸೇವಿಸುವ ಈ ಹಬ್ಬ ಮನುಕುಲವೆಲ್ಲ ಕಷ್ಟ-ಸುಖವನ್ನು ಸಮಾನವಾಗಿ ಸ್ವಿಕರಿಸಿ ಒಂದಾಗಿ ಹೋಗುವ ಮಾರ್ಗವನ್ನು ಈ ಹಬ್ಬ ತೋರಿಸುತ್ತದೆ. ಆದರೆ ಇತ್ತೀಜಿನ ದಿನಮಾನಗಳಲ್ಲಿ ಹಬ್ಬಗಳ ಸಂಭ್ರಮ ಕಡಿಮೆಯಾಗಿ ವಿದೇಶ ಸಂಸ್ಕೃತಿ ನಮ್ಮ ಹಬ್ಬದಲ್ಲಿ ಸೇರಿಕೊಳ್ಳುವದರಿಂದ ಅಪಾರ್ಥವಾಗಿ ಹೊಗುತ್ತಿವೆ.ನಮ್ಮ ಸಂಸ್ಕೃತಿ ಗ್ರಾಮೀಣ ಸೊಗಡು ಸಂಪ್ರದಾಯ, ಪರಂಪರೆ ನಿರಂತರವಾಗಿ ಸಾಗಲು ಹಾಗೂ ನಮ್ಮ ಉಡುಪು ಈ ಹಬ್ಬದ ದಿನಗಳಲ್ಲಾದರೂ ಹೊರಬರಲಿ ಎನ್ನುವ ಉದ್ದೇಶದಿಂದ ವರ್ಷದ ಎಲ್ಲ ಹಬ್ಬಗಳನ್ನು ನಾವು ವಿಶೇಷವಾಗಿ ಶಾಲಾ ಮಕ್ಕಳಿಂದ ಆಚರಿಸುತ್ತಾ ಬಂದಿದ್ದು ಈ ಸಂಕ್ರಾಂತಿ ಸಹ ವಿಶೇಷವಾಗಿ ನಾವು ಆಚರಿಸಿದ್ದೇವೆ. ಮಕ್ಕಳು ಹಾಗೆ ಹಬ್ಬಕ್ಕೆ ವಿಶೇಷವಾಗಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆರಾದ ಸ್ನೇಹಲ್ ಅಂಗಡಿ,ಬಿವಿವಿ ಶಿಕ್ಷಣ ಸಂಸ್ಥೆಯ ಸದಸ್ಯರಾದ ಅರುಣಾ ಅಂಗಡಿ, ಲಕ್ಷ್ಮೀ ಅಂಗಡಿ,ಬೋಧಕರಾದ ಗೀತಾ ಪಾಟೀಲ ,ಹನಮಂತ ಪಾಟೀಲ, ಶಿವಲೀಲಾ ಹಿರೇಮಠ, ಅನ್ನಪೂರ್ಣಾ ಚಿಚಖಂಡಿ, ಮಂಜುಳಾ ನಾಶಿ, ಜಯಶ್ರೀ ಹುಬ್ಬಳ್ಳಿ, ವಿನಯಶ್ರೀ ಕುಲಕರ್ಣಿ, ಸುಧಾ ಮೂಡಲಗಿ, ಜ್ಯೋತಿ ಕಾಡೇ ಸೇರಿದಂತೆ ಪಾಲಕರು ಮಕ್ಕಳು ಉಪಸ್ಥಿತರಿದ್ದರು.