ಪ್ರೀತಿ, ಸಹೋದರತೆಯಿಂದ ಹಬ್ಬ ಆಚರಿಸಿ: ಪ್ರಭು

ಲೋಕದರ್ಶನ ವರದಿ

ಮೂಡಲಗಿ 6: ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಹೋಳಿ ಹಬ್ಬವನ್ನು  ಭಾವೈಕ್ಯತೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರೀತಿ ಸಹೋದರ ಮನೋಭಾವದಿಂದ ಆಚರಿಸೋಣ ಎಂದು ಗೋಕಾಕ ಡಿವೈಎಸ್ಪಿ ಡಿ.ಟಿ. ಪ್ರಭು ಹೇಳಿದರು. 

ಅವರು ಶುಕ್ರವಾರ ಸಂಜೆ ಪೋಲಿಸ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ  ಹೋಳಿ ಹಬ್ಬದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಮಾನವೀಯತೆ ದೃಷ್ಟಿಯಿಂದ ಹಬ್ಬವನ್ನು ಆಚರಿಸೋಣ ಕಳೆದ ಬಾರಿಯ ಪ್ರವಾಹ ಎಲ್ಲರನ್ನು ಸಂತ್ರಸ್ತರನ್ನಾಗಿ ಮಾಡಿದೆ. ಜನರು ಮನೆಗಳನ್ನು ಕಳೆದುಕೊಂಡು ಸಹಾಯ ಹಸ್ತಕ್ಕಾಗಿ ಕೈಚಾಚುತ್ತಿದ್ದಾರೆ. 

ಮನೆಯ ಕಿಟಕಿ ಬಾಗಿಲು ಇನ್ನು ಉಪಯೋಗಕ್ಕೆ ಬರುವ ಕಟ್ಟಿಗೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ ಅವುಗಳನ್ನು ಕಾಮದಹನದ ನೆಪದಿಂದ ಕದ್ದು ಸುಡವ ಕೆಲಸವನ್ನು ಯಾರು ಮಾಡಬಾರದು. ಹಬ್ಬದ ನೆಪದಲ್ಲಿ ಅವರ ಬದುಕು ಸುಡುವುದು ಬೇಡ. ಸಾರ್ವಜನಿಕರಿಗೆ ಒತ್ತಾಯ ಪೂರ್ವಕವಾಗಿ ಬಣ್ಣವನ್ನು ಎರಚಿ ತೊಂದರೆ ಮಾಡಬೇಡಿ. ಈ ಹಬ್ಬವು ಹಿಂದೂ ಧರ್ಮದ ಹಲವು ಐತಿಯಗಳಿರುವ ಹಬ್ಬವಾಗಿರುವುದರಿಂದ ಯಾವುದೇ ತರಹದ ಗಲಾಟೆಗಳು ಜರುಗದಂತೆ ಪ್ರೀತಿ ಸೌಹಾರ್ಧತೆಯಿಂದ ಹಬ್ಬ ಆಚರಿಸಿ. ಕುಡಿಯುವ ನೀರು ಇರುವಲ್ಲಿ ಬಣ್ಣವನ್ನು ಆಡಿ ನೀರನ್ನು ಕಲುಷಿತಗೊಳ್ಳಿಸಬೇಡಿ.

ದ್ವೇಷ ಭಾವನೆಯಿಂದ ಬಣ್ಣ ಎರಚಿ ಸಂಭ್ರಮಿಸಬೇಡಿ. ಬಣ್ಣ ಆಡಿದ ನಂತರ ಹೊಳೆ ಬಾವಿಗಳಲ್ಲಿ ಸ್ನಾನಕ್ಕೆ ತೆರಳುವವರು ಸುರಕ್ಷಿತ ಕ್ರಮ ಅನುಸರಿಸಿ. ರಂಗಪಂಚಮಿ ಹಬ್ಬವನ್ನು ಎಲ್ಲ ಧಮರ್ಿಯರು ಖುಷಿ ಖುಷಿಯಾಗಿ ಆಚರಿಸಿ ಸಂಭ್ರಮಿಸೋಣ. ಸಾರ್ವಜನಿಕರ ಹಿತದೃಷ್ಟಿಯಿಂದ ಮೂಡಲಗಿ ಪಟ್ಟಣದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪೋಲಿಸ್ ಇಲಾಖೆಯೂ ಸಂಚಾರಿ ನಿಯಮವನ್ನು ಪಾಲಿಸಲು ಕ್ರಮಕೈಗೊಂಡಿದೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ತಾಲೂಕಿನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಾದರೆ ತಕ್ಷಣವೇ ಪೋಲಿಸ್ ಇಲಾಖೆಯ ಗಮನಕ್ಕೆ ತರಬೇಕು. ಎಲ್ಲರು ಒಗ್ಗಟ್ಟಿನಿಂದ ಸೌಹರ್ದತೆಯಿಂದ ಹಬ್ಬವನ್ನು ಆಚರಿಸಿ. ಸಾರ್ವಜನಿಕರಿಗೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ಸಂಭವಿಸಿದರೇ ಅಂತವರ ವಿರುದ್ದ ಇಲಾಖೆಯೂ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದರು.

ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ ಮಾತನಾಡಿ, ಮೂಡಲಗಿಯ ಎ.ಪಿ.ಎಮ್.ಸಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ಕೆಲವೊಂದು ಬದಲಾವಣೆಯ ಸಂಚಾರಿ ನಿಯಮಗಳನ್ನು ಕೈಗೊಂಡಿದೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಮುಖಂಡರಾದ ಮಲ್ಲಪ್ಪ ಮದುಗುಣಕಿ, ರಮೇಶ ಸಣ್ಣಕ್ಕಿ, ಸದಾಶಿವ ತಲಬಟ್ಟಿ, ಸತ್ಯಾಪ್ಪ ಕರೆವಾಡಿ, ಜಯ ಕನರ್ಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ ಮಾತನಾಡಿದರು. ಸಭೆಯಲ್ಲಿ ಪುರಸಭೆ ಸದಸ್ಯರು, ಸಂಘ ಸಂಸ್ಥೆಯ ಪದಧಿಕಾರಿಗಳು, ವಿವಿಧ ಹಳ್ಳಿಗಳ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.