ಲೋಕದರ್ಶನ ವರದಿ
ಶಿರಹಟ್ಟಿ: ಕೋಮು ಸೌಹಾರ್ದತೆಯ ಹರಿಕಾರರಾದ ಜ. ಫಕ್ಕೀರೇಶ್ವರರ ತಪೋಭೂಮಿಯಲ್ಲಿ ಹಿಂದೂ ಮುಸ್ಲೀಂ ಹಾಗೂ ಸರ್ವ ಧರ್ಮದ ಬಾಂಧವರು ಈದ ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡುವುದರ ಮೂಲಕ ಸಮಾಜದಲ್ಲಿ ಸಾಮರಸ್ಯೆ ಬೆಳೆಸಬೇಕು ಎಂದು ಸಿಪಿಐ ರೇವಣೆಪ್ಪ ಕಟ್ಟೀಮನಿ ಹೇಳಿದರು.
ಸ್ಥಳೀಯ ಜನಸ್ನೇಹಿ ಪೋಲಿಸ್ ಠಾಣೆಯಲ್ಲಿ ಈದ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಐಕ್ಯತೆ ಹಾಗೂ ಸಾಮರಸ್ಯೆ ಬೆಳೆಯಬೇಕಾದರೆ, ಯುವಕರು ಜಾಗೃತರಾಗಿ, ಸರ್ವರನ್ನೂ ಪ್ರೀತಿಸಿ, ಸರ್ವ ಧರ್ಮವನ್ನು ಆರಾಧಿಸಿ, ಸರ್ವ ಜನಾಂಗಕ್ಕೂ ಒಳ್ಳೆಯದನ್ನೂ ಬಯಸಿ, ಸರ್ವರೂ ಸುಖಃ ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತೆ ಬಯಸುವಂತಹ ಹೃದಯ ಶ್ರೀಮಂತಿಕೆ ಹೊಂದಬೇಕು. ಅಂದಾಗ ಮಾತ್ರ ಭಾರತೀಯ ಸಂಸ್ಕೃತಿ ಹಾಗೂ ಹಬ್ಬಗಳಿಗೆ ಚ್ಯುತಿ ಬರದೆ ಶಾಂತಿಯುತವಾಗಿ ನಡೆಯುತ್ತವೆ. ಆದ್ದರಿಂದ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸೌಹಾರ್ಧತೆಯನ್ನು ಕಾಪಾಡದೇ ಶಾಂತಿ ಕದಲುವ ಚಟುವಟಿಕೆಯನ್ನುಂಟುಮಾಡುವಲ್ಲಿ ಮುಂದಾದರೆ ನಿದರ್ಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಡಿಜೆ ಬಳಸುವ ಹಾಗಿಲ್ಲ ಜೊತೆಗೆ ಯಾವುದೇ ಕೋಮಿನವರು ಮಧ್ಯಪಾನವನ್ನು ಸೇವಿಸಿ ಆಚರನೆಗೆ ತೊಂದರೆಯನ್ನುಂಟು ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದ್ದರಿಂದ ಸರ್ವರೂ ಈದ ಮಿಲಾದ್ ಹಬ್ಬವನ್ನು ಶಾಂತಿ, ಸಹನೆ, ಸುವ್ಯವಸ್ಥೆ ಹಾಗೂ ಸಂಭ್ರಮದಿಂದ ಆಚರಿಸುವುದರ ಮೂಲಕ ಭಾವೈಕ್ಯೆತೆ ನಾಡಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಸವರಾಜ ತಿಪ್ಪಾರಡ್ಡಿ, ಪಪಂ ಸದಸ್ಯ ಪರಮೇಶ ಪರಬ, ಫಕ್ಕೀರೇಶ ರಟ್ಟಿಹಳ್ಳಿ, ಅಶರತಲಿ ಢಾಲಾಯಿತ, ಇಸಾಕ್ ಆದ್ರಳ್ಳಿ, ಮುಖಂಡ ಎಚ್.ಡಿ. ಮಾಗಡಿ, ಸಿ.ಕೆ. ಮುಳಗುಂದ, ಅಜ್ಜು ಪಾಟೀಲ, ಮುತ್ತು ಬಾವಿಮನಿ, ಬಾಬು ಮಾಚೇನಹಳ್ಳಿ, ಬಸವರಾಜ ನಾಯಕರ, ಪೋಲಿಸ್ ಸಿಬ್ಬಂದಿಗಳಾದ ಪಿ.ಎಂ. ತೋರತ, ಆರ್.ವಿ. ಪಾಟೀಲ, ಡಿ.ಎಸ್. ನಧಾಫ್, ಎಲ್.ಎಚ್. ಲಮಾಣಿ, ಪಿ.ಎಂ. ರಂಗರೇಜ ಸೇರಿದಂತೆ ಹಿಂದು, ಮುಸ್ಲೀಂ ಮುಖಂಡರು ಉಪಸ್ಥಿತರಿದ್ದರು.