ಶಾಂತಿ ಸೌಹಾರ್ದಯುತ ಹೋಳಿ ಆಚರಿಸಿ

ಗದಗ 09: ಹೋಳಿ ಆಚರಣೆಯ ಸಂದರ್ಭದಲ್ಲಿ ಒತ್ತಾಯ ಹಣ ವಸೂಲಿ ಅಥವಾ ಮೆರವಣಿಗೆ ವೇಳೆ ಡಿಜೆ ಬಳಸಿ ಸಾರ್ವಜನಿಕರಿಗೆ ತೊಂದರೆ ಮಾಡದೇ ಶಾಂತಿಯುತ ಹೋಳಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಬೇಕು ಎಂದು ಗದಗ ಶಹರ ವೃತ್ತ ಸಿಪಿಐ ಆರ್.ಎಫ್.ದೇಸಾಯಿ ತಿಳಿಸಿದರು.

ಹೋಳಿ ಹಬ್ಬದ ಪ್ರಯುಕ್ತ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಾ. 6ರಂದು ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಮಾ. 09 ರಿಂದ 13ರವರೆಗೆ ಹೋಳಿ ಹಬ್ಬ ಇದ್ದು, ಬಣ್ಣದ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದರು.

ಕಾಮ ರತಿಯರ ಮೂತರ್ಿಗಳ ಹತ್ತಿರ ದಿನದ 24ಗಂಟೆ ಭದ್ರತೆ ದೃಷ್ಟಿಯಿಂದ ಸ್ವಯಂ ಸೇವಕರು ಇರಬೇಕು. ಸಂಬಂಧಿಸಿದ ಇಲಾಖೆಗಳಿಂದ ಅಗತ್ಯದ ಅನುಮತಿ ಪಡೆದುಕೊಳ್ಳಬೇಕು. ರಸ್ತೆಯ ಮೇಲೆ ಕಾಮ ದಹನ ಮಾಡಬಾರದು. ಪೆಂಡಾಲ್ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮೆರವಣಿಯ ಸಂದರ್ಭದಲ್ಲಿ ಪ್ರಚೋದನಕಾರಿ ಹಾಗೂ ಕೋಮುವಾದಿ ಹಾಡುಗಳನ್ನು ಹಾಡದೇ, ಶಾಂತಿಯುತ ಹೋಳಿ ಹಬ್ಬ ಆಚರಿಸಬೇಕು.  ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೇಸಾಯಿ ನುಡಿದರು.

ಹೋಳಿ ಹಬ್ಬದ ನಿಮಿತ್ಯ ಮಾ. 13ರ ಶುಕ್ರವಾರದಂದು ಮುಂಜಾನೆ ಕಾಮ ದಹನ ನಡೆಯಲಿದೆ. ನಂತರ ಕಾಮ ರತಿಯರ ಮೆರವಣಿಗೆ ಮಾಡಲಾಗುತ್ತದೆ. ನಗರದಲ್ಲಿ ಸದ್ಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚಬಾರದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಗದಗ ಶಹರ ಪೊಲೀಸ್ ಠಾಣೆ ಪಿಎಸ್ಐ ಎಚ್.ಎಚ್.ವಡ್ಡರ, ಸಮುದಾಯಗಳ ಗಣ್ಯರಾದ ಎಸ್.ಎನ್.ಬಳ್ಳಾರಿ, ಅಕ್ಬರಸಾಬ ಬಬಚರ್ಿ, ಬಾಷಾ ಮಲ್ಲಸಮುದ್ರ, ವಿಜಯ ಕಲ್ಮನಿ, ಮುನ್ನಾ ರೇಶ್ಮಿ, ರಾಮಣ್ಣ ಪಲದೊಡ್ಡಿ, ಅಬ್ದುಲ ಮುನಾಫ್ ಮುಲ್ಲಾ, ಅಂಬರೀಷ್ ಬೆಟಗೇರಿ, ಕಿಶನ್ ಮೆಹರವಾಡೆ ಹಾಗೂ ಇತರ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.