ಬಾಗಲಕೋಟೆ 19:
ನಗರದಲ್ಲಿ ಅಕ್ಟೋಬರ 21 ರಂದು ನಗರ ವಾಷರ್ಿಕೋತ್ಸವ
ನಿಮಿತ್ತ ಹಮ್ಮಿಕೊಂಡ ಆರ್.ಎಸ್.ಎಸ್
ಪಥ ಸಂಚಲವನ್ನು ಶಾಂತಿ, ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ
ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ
ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ಜರುಗಿದ
ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಆರ್ಎಸ್ಎಸ್ ಪಥ ಸಂಚಲನವನ್ನು ಎಲ್ಲ
ಸಮುದಾಯದವರು ಪರಸ್ಪರ ಸೌಹಾರ್ದತೆ, ಸದ್ಬಾವನೆಯಿಂದ ಆಚರಿಸುವದರ ಜೊತೆಗೆ ನಗರದಲ್ಲಿ ವ್ಯಕ್ತಿಗತವಾಗಿ ಯಾರ ಭಾವನೆಗೂ ಧಕ್ಕೆ
ತರುವಂತ ಹಾಗೂ ಕೋಮು ಸೌಹಾರ್ದತೆ
ಕದಡುವ ಘೋಷಣೆ ಹಾಗೂ ಭಾವಚಿತ್ರವುಳ್ಳ ಬಂಟಿಂಗ್ಸ್,
ಬ್ಯಾನರ್ಗಳನ್ನು ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರ್ಎಸ್ಎಸ್ ಪಥಸಂಚಲನ ಒಂದು ಉತ್ತಮ ಪ್ರಯೋಗವಾಗಿದ್ದು,
ಎಲ್ಲ ಸಮುದಾಯದವರು ನೋಡುವಂತಹದ್ದಾಗಿದೆ. ಶಿಸ್ತಿನಿಂದಲೇ ಪಥಸಂಚಲವನ್ನು ಉತ್ಸವದಂತೆ ಆಚರಿಸಿ ಸಂಭ್ರಮ ತರುವಂತೆ ತಿಳಿಸಿದರು.
ನಗರ ಸಭೆಯು ಪಥ
ಸಂಚಲನದ ಮಾರ್ಗವನ್ನು ಸ್ವಚ್ಛತೆಗೊಳಿಸಬೇಕು. ರಸ್ತೆಯಲ್ಲಿಯೂ ತಗ್ಗುದಿನ್ನೆ ಮುಚ್ಚುವಂತೆ ತಿಳಿಸಿದರು. ಬಸವೇಶ್ವರ ಸರ್ಕಲ್ ವೃತ್ತದ ಸುತ್ತ ಮತ್ತು ಭದ್ರತೆ ಇಲ್ಲದ ಕಟ್ಟಡಗಳಲ್ಲಿ ಮೇಲೆ ನಿಂತು ಬಹಳಷ್ಟು
ಜನ ಪಥಸಂಚಲನ ವೀಕ್ಷಿಸುತ್ತಿರುತ್ತಾರೆ. ಹಾಗಾಗದಂತೆ ಸ್ವಯಂ ಸೇವಕರು ನೋಡಿಕೊಳ್ಳುವ ಕೆಲಸವಾಗಬೇಕು ಎಂದರು. ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ
ಮಾತನಾಡಿ ಪಥ ಸಂಚಲನದ ಪೂರ್ವದಲ್ಲಿ
ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿಯ ಮಾರ್ಗ
ಸೂಚಿಯ ಸಂಪೂರ್ಣ ವಿವರವನ್ನು ಲಿಖತ ರೂಪದಲ್ಲಿ ಪೊಲೀಸ್
ಇಲಾಖೆ ನೀಡಿ ಕಡ್ಡಾಯವಾಗಿ ಅನುಮತಿ
ಪಡೆಯಬೇಕು. ಯಾರ ಭಾವನೆಗೆ ದಕ್ಕೆ
ಬರುವಂತಹ ಸ್ಲೋಘನಗಳನ್ನು ಹೇಳಬಾರದೆಂದರು.
ಬಹಳಷ್ಟು ಜನಸಂದನೆ ಕೂಡುವ ಬಸವೇಶ್ವರ ಸರ್ಕಲ್ನಲ್ಲಿ ಬ್ಯಾರಿಕೇಡ ವ್ಯವಸ್ಥೆ ಮಾಡಲಾಗುವುದೆಂದರು.
ಆರ್.ಎಸ್.ಎಸ್
ಜಿಲ್ಲಾ ಮುಖಂಡ ಡಾ.ಸಿ.ಎಂ.ಪಾಟೀಲ ಅವರು ಪಥ ಸಂಚಲನ
ಕುರಿತು ರೂಪುರೇಷೆಗಳ ಬಗ್ಗೆ ತಿಳಿಸಿದರಲ್ಲದೇ ಅಂದಾಜು 2 ಸಾವಿರ ಜನ ಘನವೇಶದಾರಿಗಳು ಭಾಗವಹಿಸಲಿದ್ದಾರೆ
ಎಂದರು. ಪಥ ಸಂಚಲನವು ಸಂಜೆ
4.15 ಗಂಟೆಗೆ ಎರಡು ಮಾರ್ಗದಲ್ಲಿ ಸಂಚರಿಸಿ
ಬಸವೇಶ್ವರ ಮಹಾವಿದ್ಯಾಲಯದ ಮೈದಾನಕ್ಕೆ ಸೇರಲಿವೆ ಎಂದು ತಿಳಿಸಿದರು. ಅಹ್ಮದ
ರಸೂಲ್ ದಂಡಿಯಾ ಮಾತನಾಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎಚ್.ಜಯ, ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕ ಗಣಪತಿ ಪಾಟೀಲ, ನಗರಸಭೆ ಸದಸ್ಯೆ ಶೋಭಾ, ಶಶಿಕಲಾ ಮಜ್ಜಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹಿಂದು ಹಾಗೂ ಮುಸ್ಲಿಂ ಸಮಾಜದ ಗಣ್ಯರು, ಹಿರಿಯರು, ಶಾಂತಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಲಹೆ ನೀಡಿದರು.