ಕಂಪ್ಲಿ 27: ಪಟ್ಟಣದಲ್ಲಿ ಮಹಾಶಿವರಾತ್ರಿ ನಿಮಿತ್ಯವಾಗಿ ಶಿವನ ದೇವಾಲಯಗಳಲ್ಲಿ ಶಿವನ ಮೂರ್ತಿಗಳನ್ನು ನಾನಾ ರೀತಿಯಲ್ಲಿ ಶೃಂಗರಿಸಿರುವುದು ಬುಧವಾರ ಕಂಡು ಬಂದಿತು. ಸ್ಥಳಿಯ ನಗರೇಶ್ವರ, ರಾಮಲಿಂಗೇಶ್ವರ, ಕಟ್ಟೆ ಬಸವೇಶ್ವರ, ಕೋಟೆಯ ಐತಿಹಾಸಿಕ ಪಂಪಾಪತಿ, ಸತ್ಯನಾರಾಯಣ ಪೇಟೆಯ ಮಲ್ಲಿಕಾರ್ಜುನ ಹಾಗೂ ವಿವಿಧ ಈಶ್ವರ ದೇವಸ್ಥಾನದಲ್ಲಿ ಶಿವನ ಮೂರ್ತಿಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಜನತೆ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿದರು. ನಂತರ ನದಿ ಪಕ್ಕದಲ್ಲಿರುವ ಐತಿಹಾಸಿಕ ಪಂಪಾಪತಿ, ಆಂಜನೇಯ, ಗಂಗಾದೇವಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ಪುನೀತರಾದರು. ಪಟ್ಟಣದಲ್ಲಿನ ದೇವಾಲಯಗಳಿಗೆ ಭಕ್ತರು ತೆರಳಿ ತಮ್ಮ ಭಕ್ತಿಯನ್ನು ಸಮರ್ಿಸಿದರು. ಸಂಜೆ ವೇಳೆಗೆ ಕೆಲ ದೇವಸ್ಥಾನಗಳಲ್ಲಿ ಭಜನೆ ಕಾರ್ಯಕ್ರಮ ಆಯೋಜಿಸಲಾಯಿತು. ಮಹಾಶಿವರಾತ್ರಿ ಅಂಗವಾಗಿ ಬಾಳೆಹಣ್ಣು, ದ್ರಾಕ್ಷಿ, ಸೇಬು, ಖರ್ಜೂರ, ಸಪೋಟ, ಕಲ್ಲಂಗಡಿ ಸೇರಿ ನಾನಾ ತರಹದ ಹಣ್ಣುಗಳ ಮಾರಾಟ ಜೋರಾಗಿ ಕಂಡು ಬಂದಿತು.