ಲೋಕದರ್ಶನ ವರದಿ
ಶಿರಹಟ್ಟಿ 07: ರಾಷ್ಟ್ರೀಯ ಹಬ್ಬಗಳಲ್ಲೊಂದಾದ ಹೋಳಿ ಹಬ್ಬದ ಆಚರಣೆಯು ಶಾಂತಿ ಮತ್ತು ಮನರಂಜನೆಯ ಪ್ರತೀಕವಾಗಬೇಕು. ಹಬ್ಬ ಹರಿದಿನಗಳು ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು, ಎಲ್ಲ ಸೌಹಾರ್ಧತೆಯಿಂದ ಆಚರಿಸಲು ಮುಂದಾಗಬೇಕೆಂದು ಸಿಪಿಐ ಆರ್.ಎಚ್ ಕಟ್ಟಿಮನಿ ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಶಾಂತಿ ಪಾಲನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ದೇಶದ ಸಂಸ್ಕೃತಿಯು ಇತರೆ ದೇಶಗಳಿಗೆ ಮಾದರಿಯಾಗಿದೆ. ಅಂತಹ ವೈಶಿಷ್ಟ್ಯ ಹಾಗೂ ಅರ್ಥಪೂರ್ಣವಾಗಿ ಹಬ್ಬಗಳನ್ನು ಆಚರಿಸುವ ದೇಶದ ಸಂಪ್ರದಾಯಕ್ಕೆ ಚ್ಯುತಿ ಬರದ ರೀತಿಯಲ್ಲಿ ಹಬ್ಬಗಳನ್ನು ಆಚರಿಸಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬವನ್ನು ನಾಗರಿಕರು ಹಾಗೂ ಯುವಕರು ಸೇರಿದಂತೆ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೇಳಿದರು.
ಪಿಎಸ್ಐ ಸುನೀಲಕುಮಾರ ನಾಯಕ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ನಮಾಜ್ (ಪ್ರಾರ್ಥನೆ) ಮಾಡಲು ತೆರಳುವಾಗ ಯಾರೂ ಬಲವಂತವಾಗಿ ಬಣ್ಣವನ್ನು ಹಚ್ಚಬಾರದು. ಬಣ್ಣಗಳಲ್ಲಿ ರಾಸಾಯನಿಕತೆಯನ್ನು ಮಿಶ್ರಣ ಮಾಡದೇ ಶುದ್ದವಾದ ಬಣ್ಣವನ್ನು ಹೋಳಿಯಲ್ಲಿ ಬಳಸಬೇಕಿದ್ದು, ಮೊಟ್ಟೆ ಹೊಡೆಯಬಾರದು. ಮಧ್ಯದಂಗಡಿಗಳನ್ನು ಬಂದ್ ಮಾಡಿಸಲಾಗುವುದು. ಮೆರವಣಿಗೆ ಹೋಗುವ ಮಾರ್ಗದ ಸಂಪೂರ್ಣ ವಿವರನ್ನು ಪೋಲಿಸ್ ಠಾಣೆಗೆ ತಿಳಿಸಬೇಕು.
ಬಂದೋಬಸ್ತ್ಗೆ ಬೇಕಾದ ಎಲ್ಲ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಹೋಳಿ ಆಚರಣೆಯಲ್ಲಿ ಅಹಿತಕರ ಚಟುವಟಿಕೆಯಲ್ಲಿ ತೊಡಗುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೋಳಲಾಗುವುದು. ಆದ್ದರಿಂದ ಪ್ರತಿಯೊಬ್ಬರು ಸೌಹಾರ್ದತೆತೆಯಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕೆಂದು ಕರೆ ನೀಡಿದರು.
ಚಾಂದಸಾಬ ಮುಳಗುಂದ, ಪ.ಪಂ ಮಾಜಿ ಅಧ್ಯಕ್ಷ ಬುಡನಶಾ ಮಕಾಂದರ, ಸದಸ್ಯ ಮುತ್ತು ಮಜ್ಜಗಿ, ಮಂಜುನಾಥ ಗಂಟಿ, ಹಮೀದ ಸನದಿ, ಹೊನ್ನಪ್ಪ ಶಿರಹಟ್ಟಿ. ಪರಮೇಶ ಭಾವಿಮನಿ, ಮುತ್ತಭಾವಿ, ಸಂಜು ಪೋತರಾಜ, ವೀರಣ್ಣಕೋಟಿ, ರಾಮಣ್ಣ ಕನ್ಯಾಳ, ಮುಸ್ತಾಕ ಚೋರಗಸ್ತಿ, ವಿನಾಯಕ ಪರಬತ, ಆನಂದ ಕೋಳಿ, ಜಾಫರ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.