ಶಾಂತಿ, ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ: ಡಿ.ಸಿ. ಸುನೀಲ್ಕುಮಾರ್ ಮನವಿ

ಕೊಪ್ಪಳ: ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಜೊತೆಗೆ ಪರಿಸರ ಸ್ನೇಹಿಯನ್ನಾಗಿ ಆಚರಿಸುವ ಮೂಲಕ ಎಲ್ಲರೂ ಸಹಕರಿಸಬೇಕು.  ಇದಕ್ಕಾಗಿ ಜಿಲ್ಲಾಡಳಿತವೂ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರು ಹೇಳಿದರು.

  ಕೊಪ್ಪಳ ಜಿಲ್ಲೆಯಾದ್ಯಂತ ಇದೇ ಸೆ. 13 ರಿಂದ ಗೌರಿ-ಗಣೇಶ ಹಬ್ಬ ಆಚರಿಸುವ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಕಳೆದ ವರ್ಷ ಹೆಚ್ಚಿನ ಶಬ್ದ ಹೊರಸೂಸುವ ಡಿಜೆ ಸೌಂಡ್ಸಿಸ್ಟಂ ಅನ್ನು ನಿಷೇಧಿಸಲಾಗಿತ್ತು.  ಎಲ್ಲರೂ ಉತ್ತಮ ರೀತಿಯಲ್ಲಿ ಸಹಕರಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.    ಈ ವರ್ಷವೂ ಕೂಡ ಡಿ.ಜೆ. ಸಿಸ್ಟಂ ನಿಷೇಧಿಸಲಾಗಿದ್ದು, ಎಲ್ಲರೂ ಸಹಕರಿಸಬೇಕು.  ಮೊಹರಂ ಹಬ್ಬವೂ ಕೂಡ ಗಣೇಶ ಹಬ್ಬದ ಸಂದರ್ಭದಲ್ಲಿಯೇ ಆಚರಿಸಲಾಗುವುದರಿಂದ ಹಬ್ಬವನ್ನು  ಎಲ್ಲ ಸಮುದಾಯದವರು ಸೌಹರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು.  ಗಣೇಶ ಮೂತರ್ಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂತರ್ಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು,  ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೊಪ್ಪಳ ಮತ್ತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿಯೇ ಏಕ-ಗವಾಕ್ಷಿ ಪದ್ಧತಿಯಲ್ಲಿ ಪರವಾನಗಿ ಒದಗಿಸಲಾಗುವುದು.  ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ದೊಡ್ಡ ಗಾತ್ರದ ಮೂತರ್ಿಯನ್ನು ಇಡುವುದು ಸಮಂಜಸವಲ್ಲ. ಆದಷ್ಟು ಚಿಕ್ಕ ಗಾತ್ರದ ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ.  ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂತರ್ಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ.   ಕುಡಿಯುವ ನೀರಿನ ಮೂಲಗಳಾದ ಬಾವಿ, ಕರೆಗಳಲ್ಲಿ ರಾಸಾಯನಿಕ ಬಣ್ಣಯುಕ್ತ ಗಣೇಶ ಮೂತರ್ಿಗಳನ್ನು ವಿಸಜರ್ಿಸಬಾರದು.  ಇಲ್ಲದಿದ್ದಲ್ಲಿ, ಕುಡಿಯುವ ನೀರು ವಿಷಯುಕ್ತವಾಗಲಿದೆ.  ಹೆಚ್ಚು ಶಬ್ದ ಬರುವ ಪಟಾಕಿಗಳು ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅಂತಹ ಪಟಾಕಿಗಳನ್ನು ಬಳಸಬೇಡಿ  ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಮನವಿ ಮಾಡಿಕೊಂಡರು.

ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಲಿ: ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುವ ರಸ್ತೆಗಳ ತೆಗ್ಗುಗಳನ್ನು ಮುಚ್ಚಿ, ರಸ್ತೆಯನ್ನು ಸಮರ್ಪಕವಾಗಿಸಬೇಕು.  ಕೊಪ್ಪಳ ನಗರದಲ್ಲಿ ಸಣ್ಣ ಪುಟ್ಟ ಗಣೇಶ ಮೂತರ್ಿಗಳ ವಿಸರ್ಜನೆಗೆ ಸಂಚಾರಿ ವಾಹನದ ಮೂಲಕ ವ್ಯವಸ್ಥೆಯನ್ನು ನಗರಸಭೆಯ ವತಿಯಿಂದ ಮಾಡಬೇಕು.  ಶಾಂತಿ ಪಾಲನೆಯ ದೃಷ್ಟಿಯಿಂದ ಮದ್ಯಪಾನ ಮಾರಾಟವನ್ನು ನಿರ್ಬಂಧಿಸಬೇಕು.  ಗಣೇಶ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ದಿನದವರೆಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಬಾರದು, ಅಲ್ಲದೆ ಗಣೇಶ ಸ್ಥಾಪಿಸುವ ಪೆಂಡಾಲ್ಗಳಲ್ಲಿ ವಿದ್ಯುತ್ ಸಂಪರ್ಕ ಸುರಕ್ಷಿತವಾಗಿರುವ ಬಗ್ಗೆ ಜೆಸ್ಕಾಂನವರು ತಂಡ ರಚಿಸಿಕೊಂಡು, ಪರಿಶೀಲನೆ ನಡೆಸಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು.  ಜಿಲ್ಲೆಯಾದ್ಯಂತ ಗಣೇಶ ಹಬ್ಬ ಆಚರಣೆ ಅವಧಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಗಳು ಸಜ್ಜಾಗಿರಬೇಕು.  ಆಯಾ ತಾಲೂಕು ಕೇಂದ್ರ ಹಾಗೂ ಸ್ಥಳೀಯ ಸಂಸ್ಥೆಗಳು, ಗಣಪತಿ ವಿಸರ್ಜನೆಗೆ ಸ್ಥಳವನ್ನು ನಿಗದಿಪಡಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಮೆರವಣಿಗೆ ಸಾಗುವ ದಾರಿಯಲ್ಲಿ ಬೀದಿ ದೀಪದ ವ್ಯವಸ್ಥೆ ಹಾಗೂ ವಿಸರ್ಜನಾ ಸ್ಥಳದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಅಸಭ್ಯ ವರ್ತನೆ ಬೇಡ: ಗಣೇಶ ಹಬ್ಬದ ಸಂದರ್ಭದಲ್ಲಿ, ಮೆರವಣಿಗೆ ಕಾಲಕ್ಕೆ ಮದ್ಯಪಾನ ಮಾಡಿ ಅಸಭ್ಯ ನೃತ್ಯ ಮಾಡುವುದು, ಅವಾಚ್ಯ ಶಬ್ದಗಳನ್ನು ಬಳಸಿ ಯಾರನ್ನೂ ನಿಂದಿಸುವುದು, ಪೊಲೀಸರೊಂದಿಗೆ ಅನವಶ್ಯಕವಾಗಿ ಜಗಳ ಮಾಡಿ, ಉದ್ವಿಗ್ನ ವಾತಾವರಣ ಸೃಷ್ಟಿಸುವುದು ಸಭ್ಯ ನಾಗರಿಕರ ಲಕ್ಷಣವಲ್ಲ.  ಗಣೇಶ ಹಬ್ಬವನ್ನು ಸಂಭ್ರಮಿಸುವಂತಾಗಬೇಕು.  ಈ ನಿಟ್ಟಿನಲ್ಲಿ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಸ್ವಯಂ ಸೇವಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.  ಸಾಧ್ಯವಾದಲ್ಲಿ ಮುಖಂಡರುಗಳು ಸ್ವಯಂ ಪ್ರೇರಿತರಾಗಿ ಈ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.

  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರನ್ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ಗಣೇಶ ಮೂತರ್ಿ ಕೂರಿಸುವ ಮಂಡಳಿಗಳು ಕಡ್ಡಾಯವಾಗಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು.  ಇದರಿಂದ ಎಲ್ಲರೂ ನೆಮ್ಮದಿಯುತವಾಗಿ ಹಬ್ಬವನ್ನು ಸಂಭ್ರಮಿಸಲು ಸಹಕಾರಿಯಾಗಲಿದೆ.  ಗಣೇಶ ಮಂಡಳಿಗಳು ಅನುಮತಿಗೆ ಅಜರ್ಿ ಸಲ್ಲಿಸುವ ಸಂದರ್ಭದಲ್ಲಿಯೇ ಸ್ವಯಂ ಸೇವಕರ ಪಟ್ಟಿಯನ್ನು ಹಾಗೂ ವಿಸರ್ಜನೆಯ ದಿನಾಂಕ, ಮೆರವಣಿಗೆಯ ಮಾರ್ಗ ಕುರಿತು ವಿವರ ಸಲ್ಲಿಸಬೇಕು.  ವಿದ್ಯುತ್ ಅಥವಾ ಬೆಂಕಿ ಅವಘಡಗಳಿಂದ ರಕ್ಷಿಸಲು ಎಲ್ಲ ಅಗತ್ಯ ಜೀವರಕ್ಷಕಗಳ ಮುಂಜಾಗ್ರತಾ ವ್ಯವಸ್ಥೆ ಕೈಗೊಳ್ಳಬೇಕು.  ಅನುಮತಿ ಪಡೆದ ಮಾರ್ಗದಲ್ಲಿಯೇ ಮೆರವಣಿಗೆ ಸಾಗಬೇಕು.  ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಮಾರ್ಗವನ್ನು ಸೂಕ್ತ ಬ್ಯಾರಿಕೇಡ್ನೊಂದಿಗೆ ಸಿದ್ಧಪಡಿಸಲಾಗುವುದು.  ಭಕ್ತಿ-ಭಾವದಿಂದ ಹಾಗೂ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಬೇಕಾಗಿದ್ದು, ಆದರೆ, ಗಣಪತಿ ಮೂತರ್ಿ ವಿಸರ್ಜನೆ ಸಂದರ್ಭದಲ್ಲಿ  ಸಾರ್ವಜನಿಕರು ಸಭ್ಯತೆಯ ಎಲ್ಲೆಯನ್ನು ಮೀರಬಾರದು.  ಮೆರವಣಿಗೆ ಸಂದರ್ಭದಲ್ಲಿ ಅನಗತ್ಯವಾಗಿ ಪೊಲೀಸರೊಂದಿಗೆ ವಾಗ್ವಾದ ಮಾಡುವಂತಿಲ್ಲ.  ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

  ಸಭೆಯಲ್ಲಿ ಭಾಗವಹಿಸಿದ್ದ ಗಣೇಶ ಉತ್ಸವ ಸಮಿತಿಗಳ ಪ್ರತಿನಿಧಿಗಳು ಮಾತನಾಡಿ,  ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ತಾತ್ಕಾಲಿಕವಾಗಿಯಾದರೂ, ದುರಸ್ತಿಯಾಗಬೇಕು.   ಸಣ್ಣ-ಪುಟ್ಟ ಗಣೇಶ ಮೂತರ್ಿಗಳ ವಿಸರ್ಜನೆಗೆ ನಗರಸಭೆ ವತಿಯಿಂದ ನೀರಿನ ಟ್ಯಾಂಕ್ಗಳ ವ್ಯವಸ್ಥೆ ಮಾಡಬೇಕು.  ಸಂಜೆ 06 ರಿಂದ ನಿರಂತರ ವಿದ್ಯುತ್ ಪೂರೈಕೆಯಾಗಬೇಕು.  ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಪ್ರಭಾರಿ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಡಿವೈಎಸ್ಪಿ ಸಂದಿಗವಾಡ, ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ವಿಜಯಕುಮಾರ್, ಕೊಪ್ಪಳ ನಗರಠಾಣೆಯ ರವಿ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ಅಪ್ಪಣ್ಣ ಪದಕಿ, ರಾಜಶೇಖರ ಆಡೂರ, ಶಿವಾನಂದ ಹೊದ್ಲೂರ, ಸೈಯದ್ ನಾಸಿರುದ್ದೀನ್, ಆದಿಲ್ ಪಟೇಲ್, ನಾಗರಾಜ ಬಳ್ಳಾರಿ, ಸಿದ್ದಪ್ಪ ಹಂಚಿನಾಳ ಹಾಗೂ ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.