ಉತ್ತರ ಕಾಶ್ಮೀರದಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ

ಶ್ರೀನಗರ, ಫೆ 3, ಉತ್ತರ ಕಾಶ್ಮೀರ ಜಿಲ್ಲೆಯ ಗಡಿ ಪಟ್ಟಣ ಕರ್ನಾದಲ್ಲಿ ಪಾಕಿಸ್ತಾನ ಪಡೆಗಳು ಸೋಮವಾರ ಕದನ ವಿರಾಮ ಉಲ್ಲಂಘಿಸಿ  ಶೆಲ್ ಮತ್ತು ಗುಂಡಿನ ದಾಳಿ ನಡೆಸಿದೆ. ಕಳೆದ 24 ಗಂಟೆಗಳಲ್ಲಿ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸಿದ ಮೂರನೇ ಪ್ರಕರಣ ಇದಾಗಿದೆ. ಪಾಕಿಸ್ತಾನ ಪಡೆಗಳು ಸೋಮವಾರ ಕರ್ನಾದಲ್ಲಿ ಸೇನಾ ನೆಲೆ  ನಾಗರಿಕ ಪ್ರದೇಶವನ್ನೂ ಗುರಿಯಾಗಿಸಿಕೊಂಡು ಅಪ್ರಚೋದಿತ ಶೆಲ್ ,  ಮತ್ತು ಗುಂಡಿನ ದಾಳಿ ನಡೆಸಿದೆ  ಎಂದು ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ.

ಎರಡೂ ಕಡೆಯಲ್ಲೂ  ಭಾರತೀಯ ಯೋಧರೂ ಇದಕ್ಕೆ ಸೂಕ್ತ  ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅವರು ಹೇಳಿದರು ಆದರೆ, ಪಾಕಿಸ್ತಾನ ಪಡೆಗೆ ಆಗಿರುವ  ಸಾವು, ನೋವಿನ ಬಗ್ಗೆ  ತಕ್ಷಣಕ್ಕೆ ಯಾವ ವರದಿ ಬಂದಿಲ್ಲ .ಭಾನುವಾರ, ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ಗುರೆಜ್‌ನ ಬಕ್ತೂರ್‌ನಲ್ಲಿ ಫಾರ್ವರ್ಡ್ ನೆಲೆಯನ್ನು ಗುರಿಯಾಗಿಸಿ  ಶೆಲ್ ದಾಳಿ  ನಡೆಸಿದಾಗ  ಸಂದೀಪ್ ಯಾದವ್ ಯೋಧ  ಸೈನಿಕ ಗಾಯಗೊಂಡಿದ್ದಾನೆ. ಕುಪ್ವಾರಾದ ತಂಗ್‌ದಾರ್ ಸೆಕ್ಟರ್‌ನಲ್ಲಿ ಭಾನುವಾರವೂ  ಪಾಕ್  ಪಡೆಗಳು ಕದನ ವಿರಾಮ  ಉಲ್ಲಂಘಿಸಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ  ಹೆಚ್ಚಿನ ಸಂಖ್ಯೆಯ ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ  ಎಂದೂ  ಅವರು ಹೇಳಿದರು.