ಲೋಕದರ್ಶನ ವರದಿ
ಗೋಕಾಕ 24: ಬಿಸಿಯೂಟ ಕಾರ್ಯ ಕತರ್ೆಯರು ಮಕ್ಕಳಿಗೆ ತಾಯಿಯಂತೆ ಪ್ರೀತಿಯಿಂದ ಬಿಸಿಯೂಟವನ್ನು ಬಡಿಸಬೇಕು ಎಂದು ಜಿ.ಪಂ ಸದಸ್ಯ ಟಿ.ಆರ್.ಕಾಗಲ ಹೇಳಿದರು.
ಅವರು ಸೋಮವಾರದಂದು ನಗರದ ಸಕರ್ಾರಿ ಪದವಿ ಪೂರ್ವ ಮಹಾವಿದ್ಯಾಲಯ (ಹೈಸ್ಕೂಲ ವಿಭಾಗ) ಸಭಾಭವನದಲ್ಲಿ ಅಡುಗೆ ಸಿಬ್ಬಂದಿ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಕರ್ಾರಿ ಶಾಲೆಗಳಲ್ಲಿ ಓದುವ ಬಡಮಕ್ಕಳಿಗೆ ಇದು ಉತ್ತಮ ಯೋಜನೆಯಾಗಿದೆ. ಇದರಿಂದ ಶಾಲೆಗಳಲ್ಲಿ ಹಾಜರಾತಿಯೂ ಉತ್ತಮವಾಗಿದೆ. ಬಿಸಿಯೂಟ ಕಾರ್ಯಕತರ್ೆಯರು ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಗುಣಮಟ್ಟದ ಆಹಾರವನ್ನು ತಯ್ಯಾರಿಸಿ ಮಕ್ಕಳಿಗೆ ಉಣ ಬಡಿಸುವಂತೆ ಕರೆ ನೀಡಿದರು.
ಈ ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ ಸುನಂಧಾ ಕರದೇಸಾಯಿ ಉದ್ಘಾಟಿಸಿದರು. ವೇದಿಕೆ ಮೇಲೆ ಕಾಮರ್ಿಕ ಮುಖಂಡ ಅಂಬಿರಾವ್ ಪಾಟೀಲ, ತಾ.ಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಬಿಇಓ ಜಿ.ಬಿ.ಬಳಗಾರ, ಬಿಸಿಯೂಟ ಸಹಾಯಕ ನಿದರ್ೇಶಕ ಎ.ಬಿ.ಮಲಬನ್ನವರ, ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ, ಎಂ.ಡಿ.ಚುನಮರಿ, ಎಸ್.ಎಸ್.ಮಾಳಗಿ, ಬಿ.ಎಸ್.ಸಿಂಗಾಡಿ, ಬಿ.ಜಿ.ಕಲ್ಲೋಳಿ. ಕೆ.ಎಸ್.ಗಸ್ತಿ, ಪಿ. ವಿ. ಮುಕರ್ಿಭಾಂವಿ, ಎಂ. ಎಸ್. ಹಣಮನ್ನವರ, ಎಚ್. ಎಂ. ಬೆಣಚಿನಮರಡಿ, ಜಿ.ಎಸ್.ಪಾಟೀಲ, ಬಿ.ಆರ್.ಮುರಗೋಡ ಸೇರಿದಂತೆ ಅನೇಕರು ಇದ್ದರು.