ಸಾಮೂಹಿಕ ವಿವಾಹಗಳಿಂದ ಜಾತಿಭೇದ, ಅಂತಸ್ತುಭೇದ ಹೋಗಲಾಡಿಸಲು ಸಾಧ್ಯ

ಲೋಕದರ್ಶನ ವರದಿ

ಕೊಪ್ಪಳ 28: ಹಾಲವರ್ತಿಯ ಜಡೇಶ್ವರ ಸನ್ನಿಧಿಯು ಭಾವೈಕ್ಯ ಕೇಂದ್ರವಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಭಕ್ತಿಕೇಂದ್ರವಾಗಿ ಬೆಳೆಸುವ ಕೇಂದ್ರ ಭಕ್ತರು ಮಾಡಬೇಕಾಗಿದೆ. ಇಂದು ಎಲ್ಲ ಜಾತಿ, ಜನಾಂಗಗಳ ಜನರ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹಗಳಿಂದ ಜಾತಿಭೇದ, ಅಂತಸ್ತುಭೇದ ಹೋಗಲಾಡಿಸಲು ಸಾಧ್ಯವಾಗುತ್ತದೆ. ಸಾಮೂಹಿಕ ವಿವಾಹಗಳಲ್ಲಿ ಮದುವೆಗಳನ್ನು ಹಮ್ಮಿಕೊಳ್ಳುವುದರಿಂದ ಸಾಲಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಗುರುಪೀಠದ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಹೇಳಿದರು.

ಅವರು ಶುಕ್ರವಾರ ಕೊಪ್ಪಳ ತಾಲೂಕಿನ ಹಾಲವರ್ತಿಯ ಜಡೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಹಾಲವತರ್ಿಯ ಜಡೇಶ್ವರ ಸಂಸ್ಥಾನಮಠದ ಶಿವಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವವಹಿಸಿ ಮಾತನಾಡುತ್ತಾ, ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ ಎಂದರು. 

ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ಅವರು ಮಾತನಾಡುತ್ತಾ, ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡುತ್ತಾ, ಜಡೇಶ್ವರ ಪುಣ್ಯಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಅನೇಕರು ವಿವಾಹಗಳಿಗಾಗಿ ಸಾಕಷ್ಟು ಸಾಲ ಮಾಡಿ, ಅದರ ಸುಳಿಯಲ್ಲಿ ಸಿಲುಕಿ ಹಾಕಿಕೊಂಡು ಅದರಿಂದ ಹೊರಬರಲಾರದೇ ವಿಲಿವಿಲಿ ಒದ್ದಾಡುತ್ತಿರುವುದು ದುರಂತದ ಸಂಗತಿ. ಸಾಲ ಮಾಡದೇ ಇಂತಹ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗಿ ಸಾಲಗಳಿಂದ ಮುಕ್ತಿ ಪಡೆಯಬೇಕು ಎಂದರು.

ಕೆ.ಆರ್. ನಗರದ ಕನಕ ಗುರುಪೀಠದ ಡಾ.ಶಿವಾನಂದಪುರಿ ಮಹಾಸ್ವಾಮಿಗಳು, ಕೊರಡಕೇರಾದ ಶಿವಪುತ್ರಯ್ಯ ಗುರುವಿನಮಠ ತೆಗ್ಗಿಯ ವಿದ್ಯಾನಂದ ಮಹಾಸ್ವಾಮಿಗಳು, ನೀರಲಕೇರಿಯ ಶಿವಾನಂದ ಮಹಾಸ್ವಾಮಿಗಳು, ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಗೇರಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಜೂಲೆಪ್ಪ ನಾಯಕ, ರೋಡಲಬಂಡಾ  ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಶಂಕ್ರಪ್ಪ ಆಶ್ಯಾಳ ನವಲಿ, ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರಾದ ಅಡಿವೆಪ್ಪ ರಾಟಿ, ತಾಲೂಕ ಪಂಚಾಯತಿ  ಸದಸ್ಯರಾದ ಚಂದ್ರಕಾಂತ ನಾಯಕ, ಹಾಲವತರ್ಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಂಚಮ್ಮ ಫಕೀರಪ್ಪ ಜಂಗ್ಲಿ, ಹಟ್ಟಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಭರಮಪ್ಪ ನಗರ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರಾದ ವೆಂಕಟೇಶ ಹಾಲವರ್ತಿ, ವಕೀಲರಾದ ಆಸಿಫ್ ಅಲಿ, ಬೆಳ್ಳೆಪ್ಪ ಗಬ್ಬೂರ, ಸುರೇಶ ಹಳ್ಳಿಕೇರಿ, ಶಿವು ಕುರಿ, 

ಹಿರಿಯರಾದ ಮುದಿಯಪ್ಪ ಬಿ.ಆದೋನಿ, ಚಾಂದಪಾಷಾ ಕಿಲ್ಲೇದಾರ,ಚಂದ್ರಯ್ಯ ಮಹಾಂತಯ್ಯನಮಠ, ಅಭಯ ಶಮರ್ಾ, ವೆಂಕಟೇಶ ಸುಂದರಂ, ನಾಗಪ್ಪ ಬಗನಾಳ, ಭೀಮಣ್ಣ ಮೂಲಿಮನಿ, ಶಿವು ಯಲಬುಗರ್ಿ, ಬಸವರಾಜ ಚಿಲವಾಡಗಿ, ಎಚ್.ಎನ್.ಮರೇಬಾಳ, ರಾಮನ್ಣ ಹದ್ದಿನ, ವೆಂಕಟೇಶ ಬಾರಕೇರ ಗಿಣಿಗೇರಿ, ಗುಡದಪ್ಪ ಬನ್ನಪ್ಪನವರ, ಅಂದಾನಸ್ವಾಮಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆನಂದ ಕಿನ್ನಾಳ ನಿರೂಪಿಸಿದರು. ಡಾ.ಬಸವರಾಜ ಜುಂಜಲಿ ಸ್ವಾಗತಿಸಿದರು. ಭರಮಪ್ಪ ಗೊರವರ ವಂದಿಸಿದರು.