ನವದೆಹಲಿ, ಡಿ ೧೬ ಆನ್‌ಲೈನ್ ನಲ್ಲಿ ನಗದು ಹಣ ವರ್ಗಾಯಿಸುವವರಿಗೆ ಆರ್‌ಬಿಐ
ಶುಭ ಸುದ್ದಿ ಪ್ರಕಟಿಸಿದೆ. ಇನ್ನು ಮುಂದೆ ನೆಫ್ಟ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್
ಫರ್) ಮೂಲಕ ನಗದು
ವರ್ಗಾಯಿಸಲು ಸಮಯ ನೋಡುವಂತಿಲ್ಲ, ದಿನಗಳಿಗಾಗಿ ಕ್ಯಾಲೆಂಡರ್ ಕೂಡಾ ನೋಡುವಂತಿಲ್ಲ. ಅಷ್ಟೇ ಅಲ್ಲ
ಇಂದಿನಿಂದ, ನೆಫ್ಟ್ ಸೇವೆಗಳು ೨೪ ಗಂಟೆಗಳೂ...
೩೬೫ ದಿನಗಳು ನಿರಂತರವಾಗಿ ಲಭ್ಯವಿರಲಿದೆ.
ಈವರೆಗೆ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್
ಫರ್(ನೆಫ್ಟ್) ಸೇವೆ ಕೇವಲ ಬೆಳಿಗ್ಗೆ ೮ ರಿಂದ ಸಂಜೆ
೬.೩೦ ವರೆಗೆ ಮಾತ್ರ ಲಭ್ಯವಾಗುತ್ತಿತ್ತು. ಆದರೆ, ಸೀಮಿತ
ಅವಧಿಯ ಈ ನೀತಿಗೆ ಆರ್ ಬಿಐ ಅಂತ್ಯಹಾಡಿದೆ.
ಹಬ್ಬದ ದಿನಗಳು, ರಜಾ ದಿನಗಳಲ್ಲಿಯೂ ಯಾವುದೇ
ಕ್ಷಣದಲ್ಲಿ ನೆಫ್ಟ್ ಮೂಲಕ ಹಣ ವರ್ಗಾಯಿಸಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಡಿಜಿಟಲ್
ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಆರ್‌ಬಿಐ ಈ ನೀತಿಯನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.
ಮತ್ತೊಂದು ಒಳ್ಳೆಯ ಸುದ್ದಿ ಏನೆಂದರೆ ... ಆರ್‌ಇಬಿಐ ಈಗಾಗಲೇ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ವಿಧಾನದಲ್ಲಿ
ನಡೆಸಲಾಗುವ ನಗದು ವರ್ಗಾವಣೆಯ ಮೇಲಿನ ಶುಲ್ಕವನ್ನು
ರದ್ದುಪಡಿಸಿದೆ.