ಟೋಕಿಯೊ, ಮೇ 20, ಜಪಾನಿನಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಳದೆ 24 ಗಂಟೆಗಳಲ್ಲಿ ದೇಶದಲ್ಲಿ ಕೇವಲ 25 ಹೊಸ ಕರೋನ ಸೋಂಕು ಪ್ರಕರಣ ದಾಖಲಾಗಿದೆ.ಸ್ಥಳೀಯ ಅಧಿಕಾರಿಗಳು ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ ಜಪಾನಿನಲ್ಲಿ ಈವರೆಗೆ ಸೋಂಕಿತ ಸಂಖ್ಯೆ 17,104 ಕ್ಕೆ ಏರಿಕೆಯಾಗಿದ್ದು 786 ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.
ಮಾಧ್ಯಮಗಳ ಪ್ರಕಾರ, 217 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರೆ ಅದೇ ಸಮಯದಲ್ಲಿ, ಒಟ್ಟು 12,537 ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಕಳೆದ ವಾರ, ಜಪಾನ್ 47 ಪ್ರಾಂತ್ಯಗಳ ಪೈಕಿ 39 ರಲ್ಲಿ ಪ್ರಂತ್ಯಗಳಲ್ಲಿ ಕರೋನವೈರಸ್ ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದೆ ಆದರೆ . ಟೋಕಿಯೊದಲ್ಲಿ, ಹೊಕ್ಕೈಡೋ ಮತ್ತು ಹಲವಾರು ಇತರ ಪ್ರಾಂತಗಳಲ್ಲಿ ಮೇ ಅಂತ್ಯದವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ .