ನಟಿ ರನ್ಯಾರಾವ್‌ ಕುರಿತು ಅಸಭ್ಯ ಪದ ಬಳಕೆ ಆರೋಪ: ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲು

Case registered against MLA Yatnal for allegedly using obscene language against actress Ranya Rao

ಬೆಂಗಳೂರು 19: ನಟಿ ರನ್ಯಾರಾವ್‌ ಕುರಿತು ಅಸಭ್ಯ ಪದ ಬಳಸಿದ ಆರೋಪ ಸಂಬಂಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾ. 17ರಂದು ವಿಜಯಪುರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಯತ್ನಾಳ್‌, ರನ್ಯಾ ಯಾರ ಜತೆ ಸಂಬಂಧ ಹೊಂದಿದ್ದಾರೆ, ಎಲ್ಲಿಂದ ಚಿನ್ನ ತಂದರು ಎಂಬ ಮಾಹಿತಿ ತೆಗೆದುಕೊಂಡಿದ್ದೇನೆ. ಅಲ್ಲದೇ ಆಕೆ ಎಲ್ಲೆಲ್ಲಿ ಚಿನ್ನ ಇಟ್ಟುಕೊಂಡು ಬಂದಿದ್ದಾಳೆ ಎಂಬ ಬಗ್ಗೆ ಅಶ್ಲೀಲ ಪದ ಬಳಸಿದ್ದಾರೆ.

ನಾಗಪ್ಪ ರೆಡ್ಡಿ ಲೇಔಟ್‌ ನಿವಾಸಿ, ವೈದ್ಯೆ ಅಕುಲಾ ಅನುರಾಧ ಎಂಬವರು ನೀಡಿದ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.