ಇಂದು ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ನಗೆಮಾತು
Caricature exhibition and humorous talk today
ಲೋಕದರ್ಶನ ವರದಿ
ಬೆಳಗಾವಿ 7- ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿನಾಂಕ 11 ಶನಿವಾರದಂದು ಸಾಯಂಕಾಲ 4-30ಕ್ಕೆ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ಬೆಂಗಳೂರಿನ ಎಚ್. ಎಸ್. ವಿಶ್ವನಾಥ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ನಗೆ ಮಾತುಗಳ ಕಾರ‌್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳಾದ ಎಸ್. ಎಂ. ಕುಲಕರ್ಣಿಯವರು ವಹಿಸಿಕೊಳ್ಳಲಿದ್ದು ಜನಪ್ರಿಯ ವ್ಯಂಗ್ಯಚಿತ್ರ ಕಲಾವಿದರಾದ ಬೆಂಗಳೂರಿನ ಎಚ್. ಎಸ್. ವಿಶ್ವನಾಥ ಇವರ ಚಿತ್ರಕಲಾ ಪ್ರದರ್ಶನವಿದ್ದು ತಮ್ಮ ನಗೆಮಾತುಗಳಿಂದ ಜನರನ್ನು ರಂಜಿಸಲಿದ್ದಾರೆ. ನಟ, ನಿರ್ದೇಶಕ ಶರಣಗೌಡ ಪಾಟೀಲ ಕಾರ‌್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಾಸ್ಯಕೂಟ ಕಲಾವಿದರಾದ ಎಂ. ಬಿ. ಹೊಸಳ್ಳಿ ನಿರೂಪಿಸಲಿದ್ದು ತಾನಾಜಿ ಪರಿಚಯಿಸಲಿದ್ದಾರೆ. ಅರವಿಂದ ಹುನಗುಂದ, ಜಿ. ಎಸ್. ಸೋನಾರ ಉಪಸ್ಥಿತರಿರುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 