ಬೆಳಗಾವಿ: ಸೈನಿಕರೊಂದಿಗೆ ಕಾರ್ಗಿಲ್ ದಿನಾಚರಣೆ

ಲೋಕದರ್ಶನ ವರದಿ

ಬೆಳಗಾವಿ 27:  ನಮ್ಮ ಮಾತೃಭೂಮಿಯ ಸುರಕ್ಷತೆಗೆ ಅಮೂಲ್ಯ ಸೇವೆಗೈದ ಸೈನಿಕರನ್ನು ನೆನೆಯುವುದಕ್ಕಾಗಿ ನಾವು ಆಚರಿಸುವಂದ ದಿನವೇ ಕಾಗರ್ಿಲ್ ವಿಜಯದಿನ.

ಸ್ಥಳೀಯ ಜೈನ ಹೆರಿಟೇಜ ಶಾಲಾ ಮಕ್ಕಳು, ನಿದರ್ೇಶಕಿ ಶೃದ್ಧಾ ಖಟವಟೆ ಹಾಗೂ ಸಿಬ್ಬಂದಿ ಈ ಪ್ರಪಂಚದ ಹೊರಗಿನ ಅನುಭವ ಪಡೆಯಲು ಮರಾಠಾ ಲೈಟ್ ಇನ್ಪ್ರಂಟಿ ರೆಜಮೆಂಟ ಕೇಂದ್ರಕ್ಕೆ ಭೇಟಿ ನೀಡಿ, ಸೈನಿಕರ ಹಲವಾರು ಸಂಗತಿಗಳನ್ನು ಅರಿಯುವುದು ಹಾಗೂ ಅವರ ಸೇವೆಯನ್ನು ಪ್ರಶಂಸಿಸುವುದು ಭೇಟಿಯ ಉದ್ಧೇಶವಾಗಿತ್ತು. 

ಬ್ರಿಟೀಶ ಕಾಲದಿಂದ ಇತ್ತೀಚಿನವರೆಗೆ ಕಣ್ಣು ಕೊರೈಸುವಂಥ ಸಶಸ್ತ್ರ ಪಡೆಗಳ ಇತಿಹಾಸ ಅರಿಯಲು ವಸ್ತು ಸಂಗ್ರಹಾಲಯಕ್ಕೆ ಒಂದು ಚಿಕ್ಕ ಪಯಣದೊಂದಿಗೆ ಭೇಟಿ ಪ್ರಾರಂಭವಾಯಿತು. ವಸ್ತು ಸಂಗ್ರಹಾಲಯವು ರಕ್ಷಣಾ ವಿಭಾಗ ಉಪಯೋಗಿಸುವಂಥ ಗತಕಾಲದ ಆಯುಧ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನಕ್ಕಿಟ್ಟಿದ್ದು ವಿದ್ಯಾಥರ್ಿಗಳ ಚಿತ್ತ ಸೆಳೆಯುವಂಥವುಗಳಾಗಿದ್ದವು. 

ರಾಜ ಮಹಾರಾಜರು ಉಪಯೋಗಿಸುತ್ತಿದ್ದ ಸಮವಸ್ತ್ರ ವಿಜೇತರು ಪಡೆದ ಪದಕ ಹಾಗೂ ಬಹುಮಾನಗಳು ಮರುಳುಗೊಳಿಸುವಂಥವುಗಳಾಗಿದ್ದವು.

ಪ್ರದರ್ಶನಗೊಳಿಸಿದ ಶಸ್ತ್ರಾಸ್ತ್ರಗಳು ವಿದ್ಯಾಥರ್ಿಗಳಿಗೆ ಕೊನೆ ಇರದ ಆಶ್ಚರ್ಯ ಹಾಗೂ ಬೆರಗುಗೊಳಿಸುವಂಥವುಗಳಾಗಿದ್ದವು.

ಒಂದು ಚಚರ್ಾ ಸಭೆಯೊಂದಿಗೆ ದಿನವು ಮುಂದುವರೆದು ಲೆಪ್ಟಿನಂಟ ಕರ್ನಲ್ ಮನೋಜ ಶೆಟ್ಟಿ ಶಸ್ತ್ರಾಸ್ತ್ರ ದಳದ ಓರ್ವ ಪ್ರತಿನಿಧಿಯಾಗಿ ಹೂಗುಚ್ಛ ಹಾಗೂ ಕಾಣಿಕೆಗಳನ್ನು ನೀಡಿದರು. ಸ್ಕೌಟ್ಸ ಹಾಗೂ ಗೈಡ್ಸ ವಿದ್ಯಾಥರ್ಿಗಳು ಹಾದರ್ಿಕವಾಗಿ ಭಾಗಿಯಾಗಿ ಸತ್ಕರಿಸಿದ್ದಕ್ಕಾಗಿ ಹಾದರ್ಿಕ ಅಭಿನಂದನೆಗಳನ್ನು ಸಲ್ಲಿಸಿದರು. ತಾವೂ ಸೈನಿಕರಲ್ಲಿ ಓರ್ವನಾಗಬೇಕೆಂದು ಭಾವ ಅವರ ವರ್ತನೆಯಲ್ಲಿ ವ್ಯಕ್ತವಾಗುತ್ತಿತ್ತು. 

ಶಾಲೆಗೆ ಮರಳಿ ಬರುವ ಸಮಯದಲ್ಲಿ ಮಳೆಗಾಲವಿರುವ ಕಾರಣ ಚಹಾ ಹಾಗೂ ಬಿಸ್ಕತ್ಗಳ ಸಮಾರಾಧನೆಯಾಯಿತು. ಕಾರ್ಯಕ್ರಮದ ಕೊನೆಗೆ ವಿದ್ಯಾಥರ್ಿಗಳು ತಾವು ಕೈಯಿಂದ ತಯಾರಿಸಿದ ಕಾರ್ಡ ಹಾಗೂ ಹೂಗಳನ್ನು ಸೈನಿಕರಿಗೆ ಜೈಹಿಂದ ಹೇಳುತ್ತ ಧನ್ಯವಾದಗಳನ್ನು ಹೇಳಿದರು.