ಇಸ್ಪೀಟ ಆಟ: ಐವರ ಬಂಧನ
Card game: Five arrested
ಜುನೆ ಬೆಳಗಾವಿ ಸ್ಮಶಾನ ಭೂಮಿ ಹತ್ತಿರ ದಿ. 10ರಂದು ಜೂಜಾಟ ಆಡುತ್ತಿದ್ದಾಗ ಶಹಾಪೂರ ಠಾಣೆಯ ಮಹಿಳಾ ಪಿಎಸ್‌ಐ ಎಸ್ ಎನ್ ಬಸವಾ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ನಗದು ಹಣ 4150 ರೂಪಾಯಿ ಮತ್ತು ಇಸ್ಪೀಟ ಎಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ನವೀನ ರವೀಂದ್ರ ಪಾಟೀಲ, ಗೌತಮ ಜೈನ್, ಪ್ರಥಮೇಶ ಯಾಧವ, ದಯಾನಂದ ಧಾಮನೇಕರ, ದೀಪಕ ಮುದಕನ್ನವರ ಇವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮೇಲ್ಕಂಡ ಒಟ್ಟು 07 ಪ್ರಕರಣಗಳಲ್ಲಿ 14 ಜನ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 13,300 ರೂ, ಮೊತ್ತವನ್ನು ಓಸಿ ಪ್ರಕರಣಗಳಲ್ಲಿ ಹಾಗೂ 8000 ಮೌಲ್ಯದ ಗಾಂಜಾವನ್ನು, ಮತ್ತು ಓ ಸಿ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದ ಸದರಿ ಠಾಣೆಗಳ ಪಿಎಸ್‌ಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಐ.ಪಿ.ಎಸ್ ಬೊರಸೆ ಭೂಷಣ್ ಗುಲಾಬರಾವ್ ಹಾಗೂ ಡಿಸಿಪಿ ಅವರುಗಳು ಶ್ಲಾಘಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 